ಗೆಳತಿಯನ್ನೇ ಈಕೆ ಬ್ಲ್ಯಾಕ್ ಮೇಲ್ ಮಾಡಿ ದೋಚಿದ್ಳು 1.25 ಕೋಟಿ

331

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಯಾವ ಸಂದರ್ಭದಲ್ಲಿ ಯಾರು ಹೇಗೆ ಶತ್ರುಗಳಾಗ್ತಾರೆ ಅನ್ನೋದೇ ಗೊತ್ತಾಗುವುದಿಲ್ಲ. ಹಿತೈಷಿಗಳೇ ಹಿತಶತ್ರುಗಳಾಗುವುದು ನಿಜಕ್ಕೂ ಅತ್ಯಂತ ನೋವಿನ ಸಂಗತಿ. ಇಲ್ಲೊಬ್ಬಳು ತನ್ನ ಗೆಳತಿಯನ್ನೇ ಬ್ಲ್ಯಾಕ್ ಮೇಲ್ ಮಾಡಿ ಬರೋಬ್ಬರಿ 1.25 ಕೋಟಿ ರೂಪಾಯಿ ದೋಚಿದ್ದಾಳೆ.

ಪೊಲೀಸರ ಅತಿಥಿಯಾಗಿರುವ ಅರ್ಪಣಾ ಅಲಿಯಾಸ್ ಅನು ಎಂಬಾಕೆ, ವೈಟ್ ಫೀಲ್ಡ್ ನಲ್ಲಿನ ನಿವಾಸಿಯೊಬ್ಬರಿಗೆ, ಮಾಜಿ ಪ್ರಿಯಕರನ ಹೆಸರಿನಲ್ಲಿ ಮೋಸ ಮಾಡಿದ್ದಾಳೆ. ಮೋಸ ಹೋದ ಮಹಿಳೆ ಹಾಗೂ ಅನು ಕಾಲೇಜು ದಿನಗಳ ಸ್ನೇಹಿತೆಯರು. ಸಂತ್ರಸ್ತೆ ಮದುವೆಗೂ ಮುಂಚೆ ಮಹೇಶ ಎಂಬಾತನನ್ನ ಪ್ರೀತಿ ಮಾಡ್ತಿದ್ಳು. ಇದು ಈಕೆಗೂ ಗೊತ್ತಿತ್ತು. ಆದ್ರೆ, ಪೋಷಕರ ಇಷ್ಟದಂತೆ ಸಂತ್ರಸ್ತೆ ಉದ್ಯಮಿಯೊಬ್ಬರನ್ನ ಮದುವೆಯಾಗಿದ್ದು, 8 ವರ್ಷದ ಮಗುವಿದೆ.

ಹೀಗಿರುವಾಗ ಕಳೆದ ಜುಲೈನಲ್ಲಿ, ಮಾಜಿ ಪ್ರಿಯಕರ ಮಹೇಶ ಹೆಸರಿನಲ್ಲಿ ಅನು ವಾಟ್ಸಪ್ ಮೆಸೇಜ್ ಮಾಡಿದ್ದಾಳೆ. ಎರಡು ದಿನಗಳ ಬಳಿಕ ಅರ್ಪಣಾ ಹೆಸರಿನಲ್ಲಿ ಮೆಸೇಜ್ ಮಾಡಿ, ನಾನು ಮಹೇಶನ ಮಾಜಿ ಪ್ರಿಯತಮೆ ಎಂದು ಹೇಳಿ ಸ್ನೇಹಿತೆಯನ್ನಾಗಿ ಮಾಡಿಕೊಂಡಿದ್ದಾಳೆ. ಇನ್ನೊಂದು ನಂಬರ್ ನಿಂದ ಮಹೇಶ ಹೆಸರಿನ ಮೂಲಕ ಮೆಸೇಜ್ ಮಾಡುತ್ತಾ, ನಮ್ಮಿಬ್ಬರ ಖಾಸಗಿ ಫೋಟೋಗಳು ನನ್ನ ಬಳಿಯಿವೆ. 1 ಲಕ್ಷ ರೂಪಾಯಿ ಕೊಡದಿದ್ರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.

ಹೀಗೆ ಮಹೇಶನ ಹೆಸರಿನಲ್ಲಿ 2019ರಿಂದ ಇಲ್ಲಿಯವರೆಗೂ ಹಂತ ಹಂತವಾಗಿ 1.25 ಕೋಟಿ ರೂಪಾಯಿ ದೋಚಿದ್ದಾಳೆ. ಸಂತ್ರಸ್ತೆ ಚಿನ್ನದ ಮೊಟ್ಟೆಯಿಡುವ ಕೋಳಿಯೆಂದುಕೊಂಡ ಅನು, ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಈಕೆ ನಿರಾಕರಿಸಿದ್ದಾಳೆ. ಆಗ ಅಶ್ಲೀಲವಾಗಿ ಎಡಿಟಿಂಗ್ ಮಾಡಿರುವ ಫೋಟೋ ಕಳುಹಿಸಿದ್ದಾಳೆ. ಇದ್ರಿಂದಾಗಿ ಸಂತ್ರಸ್ತೆ ಖಿನ್ನತೆಗೆ ಒಳಗಾಗಿದ್ದಾಳೆ. ಪತ್ನಿಯಲ್ಲಿನ ಬದಲಾವಣೆ ಗಮನಿಸಿದ ಪತಿ, ಕೌನ್ಸಲಿಂಗ್ ಮಾಡಿಸಿದ್ದಾನೆ. ಬಳಿಕ ವಿಷ್ಯ ತಿಳಿದಿದೆ. ಪತಿ, ಅರ್ಪಣಾ ಹಾಗೂ ಮಹೇಶ ಅನ್ನೋ ಹೆಸರಿನಲ್ಲಿ ದೂರು ನೀಡಿದಾಗ ಸತ್ಯ ಬಯಲಾಗಿದೆ. ಅರ್ಪಣಾ ಅಲಿಯಾಸ್ ಅನು ಅನೇಕರಿಗೆ ಇದೆ ರೀತಿ ಮೋಸ ಮಾಡಿರುವುದು ತಿಳಿದು ಬಂದಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!