ವಿಜಯಪುರ ವೈದ್ಯರ ಶಸ್ತ್ರಚಿಕಿತ್ಸೆಗೆ ವೈದ್ಯಲೋಕವೇ ಅಚ್ಚರಿ!

468

ಪ್ರಜಾಸ್ತ್ರ ಸುದ್ದಿ

ವಿಜಯಪುರ: ವೈದ್ಯಲೋಕವೇ ಅಚ್ಚರಿ ಪಡುವಂತಹ ಶಸ್ತ್ರ ಚಿಕಿತ್ಸೆಯನ್ನ ಜಿಲ್ಲೆಯ ವೈದ್ಯರು ಮಾಡಿದ್ದಾರೆ. 48 ವರ್ಷದ ವ್ಯಕ್ತಿಯ ಮೂತ್ರಕೋಶದಲ್ಲಿದ್ದ ಬರೋಬ್ಬರಿ 750 ಗ್ರಾಂ ತೂಕದ ಕಲ್ಲನ್ನ ಹೊರ ತೆಗೆದಿದ್ದಾರೆ. ಈ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ನಗರದ ಭಾಗ್ಯವಂತಿ ಆಸ್ಪತ್ರೆಗೆ ಮೂತ್ರಕೊಶದ ಸಮಸ್ಯೆಯಿಂದ 48 ವರ್ಷದ ವ್ಯಕ್ತಿಯೊಬ್ಬರು ದಾಖಲಾಗಿದ್ರು. ಅವರನ್ನ ತಪಾಸಣೆ ಮಾಡಿದಾಗ ಬೃಹತ್ ಗಾತ್ರದ ಕಲ್ಲು ಇರೋದು ಪತ್ತೆಯಾಗಿದೆ. ಇದನ್ನ ಸವಾಲಾಗಿ ಸ್ವೀಕರಿಸಿದ ಡಾ.ಅಶೋಕ ಬಿರಾದಾರ ಹಾಗೂ ಅವರ ತಂಡ, 750 ಗ್ರಾಂ ತೂಕದ ಕಲ್ಲನ್ನ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಇಂತಹ ಪ್ರಕರಣಕ್ಕೆ ವೈದ್ಯಕೀಯ ಭಾಷೆಯಲ್ಲಿ ಗೇಂಟ್ ವೆಸೈಕಲ್ ಕ್ಯಾಲಕ್ಯೂಲಸ್‌ ಅಥವಾ ಲಾರ್ಜ್ ಯುರಿನರಿ ಬ್ಲ್ಯಾಡರ್ ಸ್ಟೋನ್ ಎಂದು ಕರೆಯಲಾಗುತ್ತೆ. ಈ ರೋಗದಿಂದ ರೋಗಿಯಲ್ಲಿ ಮೂತ್ರ ಸರಿಯಾಗಿ ಹೋಗದೆ ಇರುವುದು ಮೂತ್ರ ತಡೆದು ಸಮಸ್ಯೆ ಉಂಟಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!