ಸೈಲೆಂಟ್ ಆಗಿ ಡಿ ಬಾಸ್ ಬಿಗ್ ಪ್ರಾಜೆಕ್ಟ್ ರೆಡಿ!

346

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ ಅವರ ಬಹುನಿರೀಕ್ಷಿತ ರಾಬರ್ಟ್ ಮೂವಿಗಾಗಿ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಆದ್ರೆ, ಲಾಕ್ ಡೌನ್ ಎಲ್ಲವೂ ಉಲ್ಟಾ ಮಾಡಿದೆ. ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ಮತ್ತೊಂದು ಬಿಗ್ ಪ್ರಾಜೆಕ್ಟ್ ಸೈಲೆಂಟ್ ಆಗಿ ನಡೆಯುತ್ತಿದೆ ಎಂದು ಹೇಳಲಾಗ್ತಿದೆ.

ಡಾ.ರಾಜ, ಡಾ.ವಿಷ್ಣು, ಡಾ.ಅಂಬಿ, ಟೈಗರ್ ಪ್ರಭಾಕರ ಹಾಗೂ ದುನಿಯಾ ವಿಜಿ ಸಹ ಈಗಾಗ್ಲೇ ಕಾಡಿನ ಕಥಾ ಹಂದರ ಹೊಂದಿದ ಸಿನಿಮಾ ಮಾಡಿದ್ದಾರೆ. ಇದೆಲ್ಲವೂ ಸೂಪರ್ ಹಿಟ್ ಚಿತ್ರಗಳು. ಈ ರೀತಿ ಕಾಡಿನ ಕಥೆಗಳನ್ನ ಹೆಣೆದು ಗೆದ್ದಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಡಿ ಬಾಸ್ ಗಾಗಿ ಕಾಡಿನ ಕಥೆ ರೆಡಿ ಮಾಡಿದ್ದು ಅದು ಆಫ್ರಿಕಾದ ದಟ್ಟ ಕಾಡಿನಲ್ಲಿ ನಡೆಯಲಿದೆ ಎಂದು ಹೇಳಲಾಗ್ತಿದೆ.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ನಟ ದರ್ಶನಗೆ ಕಾಡು ಪ್ರಾಣಿಗಳು, ಪಕ್ಷಿಗಳು ಅಂದ್ರೆ ಇಷ್ಟ. ಅವರು ರಾಯಭಾರಿ ಸಹ ಆಗಿದ್ದಾರೆ. ಆಗಾಗ ವೈಲ್ಡ್ ಫೋಟೋಗ್ರಫಿಗಾಗಿ ಕಾಡಿಗೆ ಹೋಗ್ತಾರೆ. ಹೀಗಾಗಿ ನಟ ದರ್ಶನಿಗೂ ಈ ಸ್ಕ್ರಿಪ್ಟ್ ಇಷ್ಟವಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅಲ್ದೇ, ದರ್ಶನ ಸಹ ಈ ಹಿಂದೆ ಆಫ್ರಿಕಾ ಕಾಡಿನಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡಿದ್ರು. ಸೋ ಇದನ್ನ ನೋಡಿದ್ರೆ, ಬಿಗ್ ಪ್ರಾಜೆಕ್ಟ್ ಓಪ್ಪಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!