ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55ನೇ ಚಿತ್ರದ ಟೈಟಲ್ ಲಾಂಚ್ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ. ಗಣೇಶ ಚತುರ್ಥಿಯ ದಿನ ಡಿ ಬಾಸ್ ನ್ಯೂ ಮೂವಿ ಟೈಟಲ್ ಲಾಂಚ್ ಆಗಲಿದೆ. ಸೆಪ್ಟೆಂಬರ್ 10ರಂದು ಬಿಡುಗಡೆಯಾಗುವ ಹೊಸ ಚಿತ್ರದ ಟೈಟಲ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ವಿ.ಹರಿಕೃಷ್ಣ, ಶೈಲಜಾ ನಾಗ್, ಬಿ ಸುರೇಶ್ ಅವರ ಹೆಸರನ್ನು ಮಾತ್ರ ತಿಳಿಸಲಾಗಿದೆ. ಉಳಿದೆಲ್ಲ ಮಾಹಿತಿ ಸೆಪ್ಟೆಂಬರ್ 10ಕ್ಕೆ ತಿಳಿಯಲಿದೆ.