5 ರೂಪಾಯಿ ನಾಣ್ಯ ನುಂಗಿದ ಮಗು ಸಾವು

218

ಪ್ರಜಾಸ್ತ್ರ ಸುದ್ದಿ

ಮೈಸೂರು: ಆಟವಾಡುತ್ತಿದ್ದಾಗ 5 ರೂಪಾಯಿ ನಾಣ್ಯ ನುಂಗಿದ 4 ವರ್ಷದ ಮಗು ಸಾವನ್ನಪ್ಪಿದೆ. ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಖುಷಿ(4) ಮೃತ ಬಾಲಕಿಯಾಗಿದ್ದಾಳೆ.

ಹಿರಿಕ್ಯಾತನಹಳ್ಳಿಯಲ್ಲಿನ ಅಜ್ಜಿಯ ಮನೆಯಲ್ಲಿ ಆಟವಾಡುತ್ತಿದ್ದಾಗ 5 ರೂಪಾಯಿ ನಾಣ್ಯ ನುಂಗಿದೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ನಾಣ್ಯ ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.




Leave a Reply

Your email address will not be published. Required fields are marked *

error: Content is protected !!