ಇಂದು ಕಾಟೇರ ಚಿತ್ರದ ಹಾಡು ಬಿಡುಗಡೆ

155

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರದ ಹಾಡೊಂದು ಇಂದು ಸಂಜೆ ಬಿಡುಗಡೆಯಾಗುತ್ತಿದೆ. ವಿಶ್ವ ರೈತ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಚಿತ್ರದ ಹಾಡು ರಿಲೀಸ್ ಮಾಡಲಾಗುತ್ತಿದೆ. ಇದಕ್ಕಾಗಿ ಮಂಡ್ಯದಲ್ಲಿ ಸಕಲ ಸಿದ್ಧತೆ ನಡೆದಿದೆ.

ಕಾಟೇರ ಸಿನಿಮಾ ಇಂದಿರಾ ಗಾಂಧಿ ಕಾಲದಲ್ಲಿ ಉಳುವವನೆ ಭೂಮಿ ಒಡೆಯ ಎನ್ನುವ ಕಾನೂನು ತಂದ ಸಂದರ್ಭದಲ್ಲಿನ ವಸ್ತುವಿಷಯ ಇಟ್ಟುಕೊಂಡು ತಯಾರಾಗಿದೆ. ಹೀಗಾಗಿ ವಿಶ್ವ ರೈತ ದಿನಾಚರಣೆ ಪ್ರಯುಕ್ತ ಹಾಡು ಬಿಡುಗಡೆಯಾಗುತ್ತಿದೆ.

ನಟ ದರ್ಶನಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಪುತ್ರ ಆರಾಧನಾ ಕಾಣಿಸಿಕೊಂಡಿದ್ದಾರೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!