ಪಾಕ್ ನೆಲದಲ್ಲಿ ಆಸೀಸ್ ತಂಡಕ್ಕೆ ಬಾಂಬ್ ದಾಳಿ ಸ್ವಾಗತ

206

ಪ್ರಜಾಸ್ತ್ರ ಕ್ರೀಡಾ ಸುದ್ದಿ

ರಾವಲ್ಪಿಂಡಿ: ಬರೋಬ್ಬರಿ 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಆಡಲು ಹೋಗಿದೆ. ಆದರೆ, ಈ ತಂಡಕ್ಕೆ ಬಾಂಬ್ ದಾಳಿಯ ಸ್ವಾಗತ ಸಿಕ್ಕಿದೆ. ಇದರಿಂದಾಗಿ ಕಾಂಗೂರ ಪಡೆ ಬೆಚ್ಚಿ ಬಿದ್ದಿದೆ. ಹೌದು, ಪಿಂಡಿ ಕ್ರೀಡಾಂಗಣದಲ್ಲಿ 3 ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಿತ್ತು. ಇದಾದ ಕೆಲ ಗಂಟೆಯಲ್ಲೇ ಪೇಶಾವರದಲ್ಲಿ ಬಾಂಬ್ ದಾಳಿ ನಡೆದಿದೆ.

ರಾವಲ್ಪಿಂಡಿಯಿಂದ 190 ಕಿಲೋ ಮೀಟರ್ ಅಂತರದಲ್ಲಿ ಪೇಶ್ವಾರದಲ್ಲಿ ಬಾಂಬ್ ದಾಳಿಯಾಗಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮಸೀದಿಯಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಇಬ್ಬರು ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಮಸೀದಿ ಪ್ರವೇಶಿಸಿದ ಕೆಲ ಕ್ಷಣದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಇದೊಂದು ಆತ್ಮಾಹುತಿ ಬಾಂಬ್ ದಾಳಿಯೆಂದು ತಿಳಿದು ಬಂದಿದೆ.

ಪಾಕ್ ಭದ್ರತಾ ವೈಫಲ್ಯದಿಂದಾಗಿ ಯಾವ ದೇಶಗಳು ಅಲ್ಲಿ ಕ್ರಿಕೇಟ್ ಸೇರಿದಂತೆ ಯಾವುದೇ ಕ್ರೀಡಾ ಕೂಟಕ್ಕೆ ಹೋಗುತ್ತಿಲ್ಲ. 1998ರ ಬಳಿಕ ಆಸ್ಟ್ರೇಲಿಯಾ 3 ಟೆಸ್ಟ್, 3 ಏಕದಿನ, 1 ಟಿ-20 ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗಿದೆ. ಆದರೆ, ಈ ಘಟನೆ ಆಸೀಸ್ ಆಟಗಾರರು ಹಾಗೂ ಮಂಡಳಿಯ ನಿಲುವು ಏನಾಗಿರುತ್ತೆ ಅನ್ನೋ ಕುತೂಹಲ ಮೂಡಿದೆ.  




Leave a Reply

Your email address will not be published. Required fields are marked *

error: Content is protected !!