ಪಾಕ್ ನಲ್ಲಿ ಬಾಂಬ್ ಬ್ಲಾಸ್ಟ್: 52 ಜನರ ಸಾವು

304

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಲಾಹೋರ್: ಪಾಕಿಸ್ತಾನದ ವಿವಿಧ ಕಡೆ ಬಾಂಬ್ ಬ್ಲಾಸ್ಟ್ ನಡೆದಿದ್ದು, 52 ಜನರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶುಕ್ರವಾರ ದಕ್ಷಿಣ ಪಾಕಿಸ್ತಾನದ ಬಲಚೂಸ್ಥಾನದ ಕಡೆ ಬಾಂಬ್ ಬ್ಲಾಸ್ಟ್ ನಡೆದಿದೆ.

ಮಸ್ಟಿಂಗ್ ಜಿಲ್ಲೆಯ ಅಲ್ ಫಲಾಹ್ ರಸ್ತೆಯ ಮದಿನಾ ಮಸೀದಿ ಹತ್ತಿರ ಸ್ಫೋಟ ನಡೆದಿದೆ. ಪ್ರವಾದಿ ಮಹಮ್ಮದ್ ರ ಜನ್ಮ ದಿನ ಆಚರಣೆ ಮಾಡಲು ಭಕ್ತರು ಸೇರಿದ್ದರು. ಈ ವೇಳೆ ಸ್ಫೋಟ ನಡೆಸಲಾಗಿದೆ. ಇದರ ಜೊತೆಗೆ ಹಾಂಗು ಜಿಲ್ಲೆಯಲ್ಲಿಯೂ ಸ್ಫೋಟ ನಡೆಸಲಾಗಿದೆ. ಜುಮಾ ಮಸೀದಿಯ ಹತ್ತಿರ ನಡೆದ ಸ್ಫೋಟದ ಸಂದರ್ಭದಲ್ಲಿ 30-40 ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!