ಪಾಕ್ ಮಾಜಿ ಪ್ರಧಾನಿ ಮನೆಗೆ ಪೊಲೀಸರು ನುಗ್ಗಿದ್ಯಾಕೆ?

146

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಲಾಹೋರ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮನೆಗೆ ನುಗ್ಗಿದ ಪೊಲೀಸರು ಅಶ್ರುವಾಯು ದಾಳಿಯ ನಡುವೆ 30 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರು ತಿಳಿಸಿದ್ದಾರೆ. ಇಮ್ರಾನ್ ಖಾನ್ ಅವರ ತೆಹ್ರೀಕ್ ಇ ಇನ್ಸಾಫ್ ಪಕ್ಷ ಹಾಗೂ ಬೆಂಬಲಿಗರು ನಿರ್ಮಿಸಿದ ಅತಿಕ್ರಮಣಗಳನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದಾರಂತೆ.

ಪೊಲೀಸರು ಮನೆಗೆ ನುಗ್ಗಿದ ವೇಳೆ ಖಾನ್ ಬೆಂಬಲಿಗರು ಲಾಠಿ ಹಿಡಿದು ಕಲ್ಲುಗಳನ್ನು, ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲು ಶುರು ಮಾಡಿದರಂತೆ. ಆದರೂ ಪೊಲೀಸರು ಒಳ ನುಗ್ಗಿದ್ದಾರೆ. ಆಗ ಪೆಟ್ರೋಲ್ ತುಂಬಿದ ಬಾಟಲ್ ಗಳು, ಕಬ್ಬಿಣದ ರಾಡ್ ಗಳು, ಮಾಸ್ಕ್ ಗಳು ಪತ್ತೆಯಾಗಿದ್ದು, ಘಟನೆಗಳು ಪೊಲೀಸರು ಗಾಯಗೊಂಡಿದ್ದಾರೆ.

ಇನ್ನೊಂದು ಕಡೆ ತೋಷಖಾನಾ ಪ್ರಕರಣದ ವಿಚಾರಣೆಗಾಗಿ ಇಸ್ಲಾಮಾಬಾದ್ ಗೆ ತೆರಳುತ್ತಿದ್ದಾಗ ಇಮ್ರಾನ್ ಖಾನ್ ಅವರ ಬೆಂಗಾವಲು ವಾಹನ ಆಪಘಾತಗೊಂಡಿದೆ. ನನ್ನ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಪಿಡಿಎಂ ಸರ್ಕಾರ ನನ್ನನ್ನು ಬಂಧಿಸಲು ಯತ್ನಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!