ಪಾಕ್ ಮಾಜಿ ಪ್ರಧಾನಿ ಹಾಗೂ ಪತ್ನಿಗೆ 14 ವರ್ಷ ಜೈಲು ಶಿಕ್ಷೆ

104

ಪ್ರಜಾಸ್ತ್ರ ಸುದ್ದಿ

ಇಸ್ಲಾಮಾಬಾದ್: ತೋಷಖಾನಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೇಬಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಮಂಗಳವಾರ ಮತ್ತೊಂದು ಪ್ರಕರಣದಲ್ಲಿ ಇಮ್ರಾನ್ ಖಾನ್ ಸೇರಿ ಇತರರಿಗೆ 10 ವರ್ಷ ಶಿಕ್ಷೆಯಾಗಿತ್ತು. ಅಕ್ಕೊ-ಯು-ಎಂಟಲಿಟಿ ಕೋರ್ಟ್ ನ್ಯಾಯಾಧೀಶರಾದ ಮೊಹಮ್ಮದ್ ಬಶೀರ್ ಅವರು, ಇಮ್ರಾನ್ ಖಾನ್ ಇರುವ ರಾವಲ್ಪಿಂಡಿಯ ಅದಿಯಾಲಾ ಜೈಲಿನಿಂದಲೇ ವಿಚಾರಣೆ ನಡೆಸಿದರು.

ಇಮ್ರಾನ್ ಖಾನ್ ಹಾಗೂ ಪತ್ನಿಗೆ 10 ವರ್ಷಗಳ ಕಾಲ ಯಾವುದೇ ಸರ್ಕಾರಿ ಹುದ್ದೆ ಹೊಂದುವಂತಿಲ್ಲವೆಂದು ಆದೇಶಿಸಲಾಗಿದೆ. ಜೊತೆಗೆ ತಲಾ 787 ಮಿಲಿಯನ್ ದಂಡ ವಿಧಿಸಲಾಗಿದೆ. ಫೆಬ್ರವರಿ 8ರಂದು ನಡೆಯಲಿರುವ ಪಾಕ್ ಸಾರ್ವತ್ರಿಕ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದ ಇಮ್ರಾನ್ ಖಾನ್ ಗೆ ಸಂಪೂರ್ಣ ಹಿನ್ನಡೆಯಾಗಿದ್ದು, ಅವರ ರಾಜಕೀಯ ಭವಿಷ್ಯ ಮುಗಿದಂತೆ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!