ಜೈಲು ಸೇರಿರುವ ಪಾಕ್ ಮಾಜಿ ಪ್ರಧಾನಿಗೆ ಮತ್ತೊಂದು ಶಾಕ್

117

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಇಸ್ಲಾಮಾಬಾದ್: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಳೆದ ಎರಡು ದಿನಗಳ ಹಿಂದೆ ಜೈಲು ಸೇರಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನು ಅಂದರೆ, ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚಿಸಿದೆ.

ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಈಗಾಗ್ಲೇ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ನಡುವೆ 5 ವರ್ಷ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಅನರ್ಹತೆಗೊಳಿಸಲಾಗಿದೆ. ನಾಳೆ ಬಹುತೇಕ ಹಾಲಿ ಸರ್ಕಾರ ಕೊನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಚುನಾವಣೆ ಆಯೋಗದ ಅಸ್ತ್ರದ ಮೂಲಕ 70 ವರ್ಷದ  ಇಮ್ರಾನ್ ಖಾನ್ ರಾಜಕೀಯ ಜೀವನಕ್ಕೆ ಫುಲ್ ಸ್ಟಾಪ್ ಇಡಲು ನೋಡಿದೆ ಅಂತಾ ಹೇಳಲಾಗುತ್ತಿದೆ.

ಹಾಲಿ ಸರ್ಕಾರ ಅವಧಿ ಆಗಸ್ಟ್ 12ಕ್ಕೆ ಮುಗಿಯಲಿದೆ. ಇದಕ್ಕೂ ಪೂರ್ವದಲ್ಲಿ ಸರ್ಕಾರ ವಿಸರ್ಜನೆಯಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ಇಮ್ರಾನ್ ಖಾನ್ ಈ ಶಾಕ್ ರಾಜಕೀಯ ಜೀವನಕ್ಕೆ ದೊಡ್ಡ ಹೊಡೆತ ಬಿದ್ದಿದೆ.




Leave a Reply

Your email address will not be published. Required fields are marked *

error: Content is protected !!