ಮತದಾರರನ್ನು ಸೆಳೆಯಲು ಬೂತ್ ಶೃಂಗಾರ

100

ಪ್ರಜಾಸ್ತ್ರ ಸುದ್ದಿ

ಹಾವೇರಿ/ಮಡಿಕೇರಿ: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಶುರುವಾಗಿದೆ. ಜನರು ನಿಧಾನವಾಗಿ ಮತಗಟ್ಟೆಯತ್ತ ಮುಖ ಮಾಡುತ್ತಿದ್ದಾರೆ. ಚುನಾವಣೆ ಆಯೋಗ ಸಾಕಷ್ಟು ಪ್ರಯತ್ನ ಮಾಡಿದರೂ ಸಹ ಶೇಕಡವಾರು ಮತದಾನ 100ರಷ್ಟು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತದಾರರನ್ನು ಸೆಳೆಯಲು ಹಲವು ರೀತಿಯ ಕಸರತ್ತುಗಳನ್ನು ಮಾಡಲಾಗುತ್ತಿದೆ.

ಕೊಡಗು ಜಿಲ್ಲಾಡಳಿತ ಮಡಿಕೇರಿ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 210 ಹಾಗೂ 211 ಅನ್ನು ಮಾದರಿ ಮತಗಟ್ಟೆ ಮಾಡಿ ಶೃಂಗರೀಸಲಾಗಿದೆ.

ಇನ್ನು ಹಾವೇರಿ ಜಿಲ್ಲಾಡಳಿತದಿಂದಲೂ ಸಹ ಮತಕ್ಷೇತ್ರದ ಒಂದು ಮತಗಟ್ಟೆಯಂತೆ ಮತದಾರರನ್ನು ಆಕರ್ಷಿಸವ ಥೀಮ್ ಇಟ್ಟುಕೊಂಡು ಅಲಂಕಾರ ಮಾಡಲಾಗಿದೆ. ಹಾವೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಏಲಕ್ಕಿ ಮಾಲೆಯ ಮತಗಟ್ಟೆ ನಿರ್ಮಿಸಲಾಗಿದೆ.

ಏಲಕ್ಕಿ ಮಾರುವ ಜನರ ಚಿತ್ರವನ್ನು ಬಿಡಸಲಾಗಿದೆ. ಟೇಬಲ್, ಕುರ್ಚಿ, ಗೋಡೆಗೆ ಏಲಕ್ಕಿ ಮಾಲೆಗಳಿಂದ ಅಲಂಕರಿಸಲಾಗಿದೆ. ಇದನ್ನು ತಯಾರಿಸಲು ಪಟವೇಗಾರ ಕುಟುಂಬಕ್ಕೆ ಜವಾಬ್ದಾರಿ ನೀಡಲಾಗಿತ್ತು. 20 ದಿನಗಳಲ್ಲಿ ಮಾಲೆಗಳನ್ನು ತಯಾರಿಸಿದ್ದು ಮಂಗಳವಾರ ಸಂಜೆ ಅಧಿಕಾರಿಗಳಿಗೆ ನೀಡಲಾಗಿತ್ತು.




Leave a Reply

Your email address will not be published. Required fields are marked *

error: Content is protected !!