‘ಬ್ರಾಹ್ಮಣರ ಶೌಚಾಲಯ’ದಿಂದ ಸುದ್ದಿಯಾದ ದೇವಸ್ಥಾನ

513

ತ್ರಿಶೂರ್: ಕೇರಳದ ತ್ರಿಶೂರ್ ನಲ್ಲಿ ಕುಟ್ಟುಮುಕ್ಕು ಮಹಾದೇವ ದೇವಸ್ಥಾನವೊಂದು ಇದೆ. ಇದು ಒಂದೇ ಒಂದು ದಿನದಲ್ಲಿ ಭರ್ಜರಿ ಸುದ್ದಿ ಮಾಡ್ತಿದೆ. ಕಾರಣ, ದೇವಸ್ಥಾನದ ಆವರಣದಲ್ಲಿರುವ ಶೌಚಾಲಯೊಂದರ ಬೋರ್ಡ್. ಅರೇ ಇದೇನಿದು ಶೌಚಾಲಯದ ಬೋರ್ಡ್ ನಿಂದ ದೇವಸ್ಥಾನ ಸುದ್ದಿಯಾಗೋದಾ ಎಂದು ಗಾಬರಿಯಾಗ್ಬೇಡಿ. ಅದಕ್ಕೂ ಒಂದು ಕಾರಣವಿದೆ.

ಕುಟ್ಟುಮುಕ್ಕು ಮಹಾದೇವ ದೇವಸ್ಥಾನದ ಆವರಣದ ಒಂದು ಬದಿಗೆ ಮೂರು ಶೌಚಾಲಯಗಳಿಗೆ. ಇದರಲ್ಲಿ ಒಂದರ ಮೇಲೆ ಪುರುಷರಿಗೆ. ಒಂದರ ಮೇಲೆ ಮಹಿಳೆಯರಿಗೆ ಎಂದು ಬರೆಯಲಾಗಿದೆ. ಇದರ ಜೊತೆಗೆ ಇನ್ನೊಂದರ ಮೇಲೆ ಬ್ರಾಹ್ಮಣರಿಗೆ ಎಂದು ಬರೆಯಲಾಗಿದೆ. ಈ ಬರಹವೇ ಇದೀಗ ವಿವಾದವಾಗಿರೋದು. ಕಳೆದ 2 ದಶಕಗಳಿಂದ ಈ ಬೋರ್ಡ್ ಗಳು ಇಲ್ಲಿವೆ. ಇದುವರೆಗೂ ಯಾರೂ ವಿರೋಧ ಮಾಡಿರಲಿಲ್ಲ. ದೂರು ಸಹ ನೀಡಿರ್ಲಿಲ್ಲ ಎಂದು ದೇವಾಲಯ ಆಡಳಿತ ಸಮಿತಿ ಅಧಿಕಾರಿ ಕಣ್ಣನ್ ಹೇಳಿದ್ದಾರೆ.

ಇದುವರೆಗೂ ನಾವು ಆ ಬೋರ್ಡ್ ಗಮನಿಸಿರಲಿಲ್ಲ. ಅಲ್ಲಿ ಏನ್ ಬರದಿದೆ ಅನ್ನೋದು ನೋಡಿರ್ಲಿಲ್ಲ. ಇದು ಗೊತ್ತಾದ ತಕ್ಷಣ ದೇಗುಲದ ಸಿಬ್ಬಂದಿಗೆ ಮಾತ್ರ ಎಂದು ಬೋರ್ಡ್ ಹಾಕಿದ್ದೇವೆ ಎಂದು ಕಣ್ಣನ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಇದನ್ನ ಒಬ್ಬರು ಹಾಕಿದ್ರಿಂದ ಇಷ್ಟೊಂದು ವೈರಲ್ ಆಗದೆ. ದೇವಸ್ಥಾನದ ಉತ್ಸವ ಹತ್ತಿರವಾಗಿದ್ದು, ಕೆಟ್ಟ ಹೆಸರು ಬರಲು ಹೀಗೆ ಮಾಡಿದ್ದಾರೆ ಎಂದು ದೇವಸ್ಥಾನದವರು ಹೇಳಿದ್ದಾರೆ. ಆದ್ರೆ, ಬ್ರಾಹ್ಮಣರಿಗೆ ಶೌಚಾಲುವೆಂದು ಬರೆದಿದ್ದು ಅತ್ಯಂತ ಕೆಟ್ಟದ್ದು ಅನ್ನೋದು ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಯದೆ ಹೋಗಿದ್ದು ದುರಂತ.




Leave a Reply

Your email address will not be published. Required fields are marked *

error: Content is protected !!