‘ನಿರ್ಭಯ’ ಸಮಾಜ ಕಟ್ಟೋಣವೆಂದ ‘ಪವರ್ ಸ್ಟಾರ್’

329

ನಾಳೆ ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಹೀಗಾಗಿ ಸಾಕಷ್ಟು ಜನರು ಹಲವು ರೀತಿಯ ಪ್ಲಾನ್ ಗಳನ್ನ ಮಾಡಿರ್ತಾರೆ. ಒಂದಿಷ್ಟು ಸಮಾಜಮುಖಿ ಕೆಲಸಗಳತ್ತ ತಮ್ಮನ್ನ ತೊಡಗಿಸಿಕೊಂಡಿರ್ತಾರೆ. ಅದೇ ರೀತಿ ಪವರ್ ಸ್ಟಾರ್ ಪುನೀತರಾಜಕುಮಾರ, ಒಂದೊಳ್ಳೆ ಮೆಸೇಜ್ ಕೊಟ್ಟಿದ್ದಾರೆ.

ಕೆಲವೊಮ್ಮ ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು. ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡು ಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ ಎಂದಿದ್ದಾರೆ. ನಟ ಪುನೀತರಾಜಕುಮಾರ ಬಿಎಂಟಿಸಿ ರಾಯಭಾರಿಯಾಗಿದ್ದು, ಮಹಿಳೆಯರ ದಿನಕ್ಕಾಗಿ ಮಾಡಿದ ವಿಡಿಯೋದಲ್ಲಿ ಅಪ್ಪು ಈ ಪವರ್ ಫುಲ್ ಮೆಸೇಜ್ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!