‘ಕಾಣದಂತೆ ಮಾಯವಾದ(ವ)ನು’ ರೀ ಎಂಟ್ರಿಯಲ್ಲಿ ಕಂಡ ಸಕ್ಸಸ್

427

ನಟ ವಿಕಾಸ ಹಾಗೂ ನಟಿ ಸಿಂಧು ಲೋಕನಾಥ ನಟನೆಯ ಕಾಣದಂತೆ ಮಾಯವಾದನು ಚಿತ್ರ ಮತ್ತೆ ರಿಲೀಸ್ ಆಗಿದೆ. ಒಂದಿಷ್ಟು ಥಿಯೇಟರ್ ಸಮಸ್ಯೆಯಿಂದ ಸ್ವಲ್ಪ ತೊಂದರೆ ಅನುಭವಿಸಿದ ಚಿತ್ರ, ಇದೀಗ ರೀ ರಿಲೀಸ್ ಆಗಿದ್ದು ಸಿನಿಪ್ರಿಯರಿಗೆ ಇಷ್ಟವಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆ ಫ್ಯಾಂಟಸಿ ಶೈಲಿಯ ಮೂವಿ ಜನರನ್ನ ಹಿಡಿದಿಡ್ತಿದೆ.

ಭೂತ ಪ್ರೇತಗಳ ಸಿನಿಮಾ ಸಾಕಷ್ಟು ಬಂದಿವೆ. ಬರ್ತಿವೆ. ಆದ್ರೆ, ಒಳ್ಳೆಯ ದೆವ್ವ ಇರುತ್ತೆ ಅನ್ನೋ ಪ್ರಶ್ನೆಯಿದ್ರೆ ಈ ಸಿನ್ಮಾ ನೋಡಬಹುದು. ಜೀವನಪೂರ್ತಿ ಕೆಟ್ಟವನಾಗಿದ್ದವನು ಒಳ್ಳವನಾಗಿ ಬದಲಾಗುವ ಟೈಂನಲ್ಲಿ ಸುತ್ತು ಹೋದ್ರೆ, ಸತ್ತವನು ಒಳ್ಳೆಯ ದೆವ್ವ ಆಗ್ತಾನಾ ಕೆಟ್ಟ ದೆವ್ವ ಆಗ್ತಾನಾ ಅನ್ನೋ ಕೌತಕವಿದೆ. ನಿರ್ದೇಶಕ ರಾಜ ಪಾತಿಪಾಟಿ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ.

ಕೊಲೆ, ಪ್ರೀತಿ, ಸ್ಪೆಷನ್ಸ್, ಕಾಮಿಡಿ, ಭೂತ ಎಲ್ಲವೂ ಇದೆ. ಆದ್ರೆ, ಇದು ಹಾರರ್ ಮೂವಿಯಲ್ಲ. ನೋಡುಗರಿಗೆ ಇಷ್ಟವಾಗುವ ಚಿತ್ರ. ಖಳನಟ ದಿವಂಗತ ರಾಘವ ಉದಯ ಫಸ್ಟ್ ಆಫ್ ನಲ್ಲಿ ಕಾಣಿಸಿಕೊಳ್ತಾರೆ. ಸೆಕೆಂಡ್ ಆಫ್ ನಲ್ಲಿ ಭಜರಂಗಿ ಲೋಕಿ ಕಾಣಿಸಿಕೊಳ್ತಾರೆ. ವಿಕಾಸ ನಟನೆ, ಸಿಂಧು ಲೋಕನಾಥ ಕಣ್ಸೆಳೆತ, ಧರ್ಮಣ್ಣ ಕಾಮಿಡಿ, ಅಚ್ಯುತಕುಮಾರ ಅದ್ಬುತ ನಟನೆ, ವಿಲನ್ ಗಳ ಭಯಾನಕ ಅಭಿನಯ ಪ್ರೇಕ್ಷಕರ ಇಷ್ಟವಾಗ್ತಿದೆ. ಚಂದ್ರಶೇಖರ ನಾಯ್ಡು ನಿರ್ಮಾಣದ ಚಿತ್ರ ಯಶಸ್ವಿ ಪ್ರದರ್ಶನ ಕಾಣ್ತಿದೆ.




Leave a Reply

Your email address will not be published. Required fields are marked *

error: Content is protected !!