ತಂಗಿ ಗಂಡ ಅಕ್ಕನಿಗೆ, ಅಕ್ಕನ ಗಂಡ ತಂಗಿಗೆ ತಾಳಿ ಕಟ್ಟಿದ್ಯಾಕೆ?

480

ಪ್ರಜಾಸ್ತ್ರ ಸುದ್ದಿ

ಉಜ್ಜಯಿನಿ: ಯಾವ ಸಂದರ್ಭದಲ್ಲಿ ಒಮ್ಮೊಮ್ಮೆ ಏನೇನು ಅನಾಹುತ ನಡೆಯುತ್ತವೆ ಅನ್ನೋದೇ ಗೊತ್ತಾಗುವುದಿಲ್ಲ. ಹೀಗಾಗಿ ನಂಬಲು ಸಾಧ್ಯವಾಗದ ಘಟನೆಗಳು ನಡೆಯುತ್ತವೆ. ಅದಕ್ಕೆ ಸಾಕ್ಷಿ ಈ ಮದುವೆ. ಹೌದು, ತಂಗಿ ಗಂಡ ಅಕ್ಕನಿಗೆ, ಅಕ್ಕನ ಗಂಡ ತಂಗಿಗೆ ತಾಳಿ ಕಟ್ಟಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಅಸ್ಲನಾ ಗ್ರಾಮದಲ್ಲಿ ನಡೆದಿದೆ.

ಇಷ್ಟಕ್ಕೂ ಇಂತಹದೊಂದು ಅನಾಹುತಕ್ಕೆ ಕಾರಣವಾಗಿದ್ದು, ವಿದ್ಯುತ್ ಸಮಸ್ಯೆ. ಸ್ಥಳೀಯರ ಮಾಹಿತಿ ಪ್ರಕಾರ ಬಹಿಲ್ ಸಮುದಾಯಕ್ಕೆ ಸೇರಿದ ಕುಟುಂಬಗಳ ಮದುವೆಯಿದು. ಲೈಟ್ ಹೋದರೆ ಹೇಗೆ ಅನ್ನೋ ಕುರಿತು ಯಾವುದೇ ವಿಚಾರ ಮಾಡಿಲ್ಲ. ಮೊದಲೇ ಹಿಂದುಳಿದ ಸಮುದಾಯ. ಹೀಗಾಗಿ ಇರೋದರಲ್ಲೇ ಮದುವೆ ಸಿದ್ಧತೆ ಮಾಡಿಕೊಂಡಿದೆ.

ಹೀಗಿರುವಾಗ ರಾತ್ರಿ ಸುದೀರ್ಘವಾಗಿ ಲೈಟ್ ಹೋಗಿದೆ. ಅದರಲ್ಲಿ ಬೇರೆ ಅಕ್ಕಿ, ತಂಗಿ ಒಂದೇ ತರಹ ಡ್ರೆಸ್ ತೊಟ್ಟಿದ್ದಾರೆ. ಇದರಿಂದಾಗಿ ನಿಖಿತಾ ಹಾಗೂ ಕರೀಶ್ಮಾ ಸಹೋದರಿಯರಿಗೆ ದಂಗ್ವಾರ ಹಾಗೂ ಗಣೇಶನೊಂದಿಗೆ ನಿಶ್ಚಿಯವಾಗಿತ್ತು. ಆದರೆ, ತಾಳಿ ಕಟ್ಟುವಾಗ ಉಲ್ಟಾ ಆಗಿದೆ. ಈ ಯಡವಟ್ಟು ಗೊತ್ತಾಗಿದ್ದು, ಅವರವರ ಗಂಡನ ಮನೆಗೆ ಹೋದಾಗಲೇ.

ಮದುವೆ ಸಂದರ್ಭದಲ್ಲಿ ನಡೆದ ಯಡವಟ್ಟು ತಿಳಿದು ಮುಂಜಾನೆ ಎರಡು ಕುಟುಂಬಸ್ಥರು ಕೂಡಿಕೊಂಡು, ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಮೊದಲೇ ನಿಶ್ಚಿಯಿಸಿದ ವಧು-ವರರೊಂದಿಗೆ ಮತ್ತೊಮ್ಮೆ ಮದುವೆ ಮಾಡಿದ್ದಾರೆ. ಅಲ್ಲಿಗೆ ಕರೆಂಟ್ ಹೋದಾಗ ನಡೆದ ಪಜೀತಿಗೆ ಸುಖಾಂತ್ಯ ಸಿಕ್ಕಿದೆ.




Leave a Reply

Your email address will not be published. Required fields are marked *

error: Content is protected !!