ಕಚೇರಿಯಲ್ಲೇ ಎಂಡಿ, ಸಿಇಒ ಹತ್ಯೆ

385

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಬ್ರಾಡ್ ಬ್ಯಾಂಡ್ ಕಂಪನಿಯ ಎಂಡಿ ಹಾಗೂ ಸಿಇಒ ಇಬ್ಬರನ್ನು ಕಚೇರಿಯಲ್ಲೇ ಹತ್ಯೆ ಮಾಡಿರುವ ಘಟನೆ ನಗರದ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಏರೋನಿಕ್ಸ್ ಮೀಡಿಯಾ ಲಿಮಿಟೆಡ್‌ನ ಎಂಡಿ ಫಣೀಂದ್ರ ಸುಬ್ರಹ್ಮಣ್ಯ (36) ಹಾಗೂ ಸಿಇಒ ವಿನಯಕುಮಾರ್(40) ಕೊಲೆಯಾದ ದುರ್ದೈವಿಗಳು. ಫಿಲಿಕ್ಸ್ ಎಂಬಾತನ ತನ್ನ ಇಬ್ಬರು ಸಹಚರರೊಂದಿಗೆ ಬಂದು ಹತ್ಯೆ ಮಾಡಿದ್ದಾನೆ.

ಈ ಹಿಂದೆ ಫಣೀಂದ್ರ ಹಾಗೂ ಫಿಲಿಕ್ಸ್ ಕೆ.ಆರ್ ಪುರಂನಲ್ಲಿ ಬ್ರಾಡ್ ಬ್ಯಾಂಡ್ ಕಂಪನಿ ನಡೆಸುತ್ತಿದ್ದರು. ಆದಾಯ ಚೆನ್ನಾಗಿ ಬರುತ್ತಿದ್ದ ಸಂದರ್ಭದಲ್ಲಿ ಫಣೀಂದ್ರ ಹೊರಬಂದ ತನ್ನದೆ ಕಂಪನಿ ಶುರು ಮಾಡಿದ. ಹೀಗಾಗಿ ಫಿಲಿಕ್ಸ್ ಗೆ ಹೊಡೆತ ಬಿದ್ದಿತ್ತು. ಇದೇ ಇಬ್ಬರ ನಡುವೆ ವೈಮನಸ್ಸು ಮೂಡಿಸುತ್ತೆ.

ಮಾತನಾಡುವ ನೆಪದಲ್ಲಿ ಕಚೇರಿಗೆ ಬಂದ ಫಿಲಕ್ಸ್ ಹಾಗೂ ಇನ್ನಿಬ್ಬರು ಫಣೀಂದ್ರ ಕ್ಯಾಬಿನ್ ನಲ್ಲಿ ಮಾತನಾಡುತ್ತಲೇ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಇದನ್ನು‌ ಬಿಡಿಸಲು ಹೋದ ವಿನಯಕುಮಾರ ಮೇಲೂ ದಾಳಿ ಮಾಡಿ ಎಸ್ಕೇಪ್ ಆಗಿದ್ದಾರೆ. ಕಣ್ಮಂದೆ ನಡೆದ ಘಟನೆಯಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಮೃತಪಟ್ಟಿದ್ದಾರೆ. ಕೊಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!