ಬುಲ್ಲಿ ಬಾಯ್ ಆ್ಯಪ್ ಬ್ಯಾನ್: ಬೆಂಗಳೂರಿನಲ್ಲಿ ಯುವಕನ ಬಂಧನ

263

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗಿಟ್ ಹಬ್ ಪ್ಲಾಟ್ ಫಾರ್ಮ್ ಹೋಸ್ಟ್ ಮಾಡಿದ ಬುಲ್ಲಿ ಬಾಯ್ ಆ್ಯಪ್ ಬ್ಯಾನ್ ಮಾಡಲಾಗಿದೆ. ಈ ಸಂಬಂಧ ಇದೀಗ ಬೆಂಗಳೂರಿನಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಮುಂಬೈ ಸೈಬರ್ ಸೆಲ್ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಐಪಿಸಿ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿವೆ. ಒಂದು ಧರ್ಮದ ಅಪರಿಚಿತ ಯುವತಿಯರ, ಮಹಿಳೆಯರ ಫೋಟೋಗಳನ್ನು ಇದರಲ್ಲಿ ಅಪ್ಲೋಡ್ ಮಾಡಿ ಅಪಪ್ರಚಾರ ಮಾಡಲಾಗುತಿತ್ತು. ಹೀಗಾಗಿ ಹಲವರು ಇದರ ವಿರುದ್ಧ ದೂರು ನೀಡಿದ್ದರು. ಈ ಕಾರಣಕ್ಕೆ ಬುಲ್ ಬಾಯ್ ಆ್ಯಪ್ ಡೆವಲಪರ್ಸ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದ ಹ್ಯಾಂಡಲ್ ಗಳ ವಿರುದ್ಧ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!