ಕಾರ್-ಬೈಕ್ ಅಪಘಾತ: ಮೂವರ ಸಾವು

232

ಪ್ರಜಾಸ್ತ್ರ ಸುದ್ದಿ

ಲಿಂಗಸೂರು: ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಬೋಗಾಪುರ ಕ್ರಾಸ್ ಹತ್ತಿರ ಕಾರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ಹೊರಟಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ಬಸವರಾಜ(25), ಪಲ್ಲವಿ(23) ಹಾಗೂ 2 ವರ್ಷದ ಮಗು ಶರತ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ಗುಂತಗೋಳ ಗ್ರಾಮಕ್ಕೆ ಹೊರಟಿದ್ದಾಗ ಈ ಅನಾಹುತ ನಡೆದಿದೆ. ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!