ಸಿಂದಗಿ ಬಳಿ ಕಾರು-ಬೈಕ್ ಅಪಘಾತ: ಓರ್ವ ಸಾವು

403

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಕಲಬುರಗಿ ಹೆದ್ದಾರಿ 50ರಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇದ್ರಿಂದಾಗಿ ಬೈಕ್ ಸವಾರ ಭೀಮಪ್ಪ ಮಲ್ಲಪ್ಪ ತುಂಬಿ(26) ಅನ್ನೋ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಸಿಂದಗಿ-ಕಲಕೇರಿ ಬೈಪಾಸ್ ಬಳಿ ಬೈಕ್ ಕ್ರಾಸ್ ಆಗುತ್ತಿದ್ದ ಸಂದರ್ಭದಲ್ಲಿ ವಿಜಯಪುರದಿಂದ ಬರ್ತಿದ್ದ ಕಾರು ಗುದ್ದಿದೆ. ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಇನ್ನು ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರ್ತಿದ್ದ ಬುಲೆರೋ ವಾಹನಕ್ಕೂ ಡಿಕ್ಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಳಾಗಿವೆ.

ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!