ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಡಿದ ಪಿಎಸ್ಐ ಉಮಾದೇವಿ

151

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನವಲಗುಂದ ರಸ್ತೆಯಲ್ಲಿ ಬುಧವಾರ ರಾತ್ರಿ  16 ಟಗರು ಮರಿಗಳು ಕಳವಾಗಿದ್ದ ದೂರ ದಾಖಲಿಸಲಾಗಿತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯೊಂದಿಗೆ ಆರೋಪಿಗಳ ಪತ್ತೆಗಾಗಿ ಗುರುವಾರ ರಾತ್ರಿ ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿಗಳಾದ ಸಿ. ಉಮಾದೇವಿ ಹಾಗೂ ಸಿಬ್ಬಂದಿ ಗದಗ ವ್ಯಾಪ್ತಿಯಲ್ಲಿ ಬರುವ ದುಂದುರ್ ಕ್ರಾಸ್ ಹತ್ತಿರ ತಮ್ಮ ಪ್ರಾಣವನ್ನೇ ಲೆಕ್ಕಿಸಿದೆ ಆರೋಪಿಗಳನ್ನು ಹಿಡಿಯುವ ಸಂದರ್ಭದಲ್ಲಿ ಕೆಲವು ಕದಿಮರು ಪೊಲೀಸರಿಗೆ ಚಾಕು ಈರೀತ ಮಾಡಿದ್ದು ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ.

ಕೊನೆಯಲ್ಲಿ 4 ಆರೋಪಿಗಳಲ್ಲಿ ಓರ್ವ ಆರೋಪಿ ಬಂಧಿಸಿ ಕಳ್ಳತನಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಣ್ಣಿಗೇರಿಯ ಪೊಲೀಸ್ ಠಾಣಾಧಿಕಾರಿಯದ ಸಿ.ಉಮಾದೇವಿ, ಸಿಬ್ಬಂದಿ ಸೋಮು ರಾಠೋಡ್, ಪಂಚಯ್ಯ ಕೋಳಿವಾಡ, ವಾಹನ ಚಾಲಕ ಯಶವಂತ, ಪವನ್ ಕುಮಾರ್, ಹುಲಿಗೆಪ್ಪ ಕುರುಬರ, ಪಾಲಾಕ್ಷಿ ರಾಮಗಿರಿ, ಶಂಕರಗೌಡ ರಾಮನಗೌಡ ,ಮೋಹನ್ ಪಾಟೀಲ್ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸೋಮು ರಾಠೋಡ್ , ಪಂಚಯ್ಯ ಕೋಳಿವಾಡ, ಯಶ್ವಂತ ಸೇರಿದಂತೆ ಇತರೆ ಗಾಯಳುಗಳಾಗಿದ್ದು ಅವರನ್ನು ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮುಂದೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇನ್ನು ಸ್ಥಳಕ್ಕೆ ಧಾರವಾಡ ಜಿಲ್ಲಾ ಡಿವೈಎಸ್ಪಿ ಶಂಕದ, ಸಿ.ಪಿ.ಐ ಧ್ರುವರಾಜ್ ಪಾಟೀಲ್ ಖುದ್ದು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಪೊಲೀಸ್ ಸಿಬಂದಿಗಳ ಆರೋಗ್ಯ ವಿಚಾರಣೆ ಮಾಡಿ ಬಳಿಕ ಆರೋಪಿ ಕುರಿತು ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ನಡೆಸಿದ್ದಾರೆ. ಕಳುವಾದ ಟಗರು ಮರಿಗಳು ನವಲಗುಂದ ರಸ್ತೆಯಲ್ಲಿರುವ ಅಣ್ಣಿಗೇರಿಯ ಬಾಬಾ ಜಾನ್ ಇಸ್ಮಾಯಿಲ್ ಅವರು ಎಂದು ತಿಳಿಯಲಾಗಿದೆ.




Leave a Reply

Your email address will not be published. Required fields are marked *

error: Content is protected !!