ಮಾಜಿ ಸಚಿವ ಬೇಗ್ ಮನೆ ಮೇಲೆ ಸಿಬಿಐ ದಾಳಿ

245

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಭಾನುವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ ಬೇಗ್ ಅವರ ಮನೆ ಮೇಲೆ ಸಿಬಿಐ ತಂಡ ಸೋಮವಾರ ಬೆಳಗ್ಗೆ ದಾಳಿ ಮಾಡಿದೆ.

ಪುಲಿಕೇಶಿ ನಗರದ ಕೋಲ್ಸ್ ಪಾರ್ಕ್ ಬಳಿಯಿರುವ ಮನೆಗೆ ದೆಹಲಿಯ 13 ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದೆ. ದಾಳಿಯ ಬಗ್ಗೆ ನೋಟಿಸ್ ಕೊಟ್ಟು, ಕುಟುಂಬಸ್ಥರ ಬಳಿಯಿದ್ದ ಮೊಬೈಲ್ ವಶಕ್ಕೆ ಪಡೆದುಕೊಂಡು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ ಖಾನ್, ಸ್ವತಃ ರೋಷನ ಬೇಗ್ ಮೇಲೆ ಆರೋಪಿ ಮಾಡಿದ್ದ. ತಮ್ಗೆ ಬೇಕಾದಗ ಹಣ ತೆಗೆದುಕೊಂಡು ಹೋಗಿದ್ದಾರೆ. ವಾಪಸ್ ಕೇಳಿದ್ರೆ ಸ್ಥಳೀಯ ರೌಡಿಗಳಿಂದ ಬೆದರಿಕೆ ಹಾಕ್ತಿದ್ರು ಅನ್ನೋ ಆಡಿಯೋವನ್ನ ಅಂದಿನ ಪೊಲೀಸ್ ಆಯುಕ್ತ ಟಿ.ಕೆ ಸುನೀಲಕುಮಾರ ಅವರಿಗೆ ನೀಡಿದ್ದ.




Leave a Reply

Your email address will not be published. Required fields are marked *

error: Content is protected !!