150 ಅಡಿ ಆಳದ ಕೊಳವೆಬಾವಿಗೆ ಬಿದ್ದ ಮಗು

240

ಪ್ರಜಾಸ್ತ್ರ ಸುದ್ದಿ

ಆಗ್ರಾ: ಸುಮಾರು 150 ಅಡಿ ಆಳದ ಕೊಳವೆಬಾವಿಗೆ 3 ವರ್ಷದ ಮಗುವೊಂದು ಬಿದ್ದಿದೆ. ಸೋಮವಾರ ಬೆಳಗ್ಗೆ ಈ ಒಂದು ಘಟನೆ ಉತ್ತರ ಪ್ರದೇಶದ ಆಗ್ರಾದ ಧರಿಯಾ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಹಾಗೂ ರಕ್ಷಣಾ ತಂಡ ಬಂದು ರಕ್ಷಿಸುವ ಕೆಲಸ ನಡೆಸಿದೆ.

ಕೊಳವೆಬಾವಿಯೊಳಗೆ ಹಗ್ಗವನ್ನ ಬಿಡಲಾಗಿದೆ. ಹಗ್ಗವನ್ನ ಮಗು ಹಿಡಿದಿದ್ದು, ಪ್ರತಿಕ್ರಿಯಿಸ್ತಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ಪ್ರತಿಯೊಬ್ಬರು ಮಗು ಸುರಕ್ಷಿತವಾಗಿ ಮೇಲೆ ಬರಲಿ ಎಂದು ಪ್ರಾರ್ಥಿಸ್ತಿದ್ದಾರೆ. ತಂದೆ ಛೋಟಾಲಾಲ್ ಕೊರೆಸಿದ ಕೊಳವೆಬಾವಿಯಲ್ಲಿ ಮಗು ಬಿದ್ದಿದೆ.




Leave a Reply

Your email address will not be published. Required fields are marked *

error: Content is protected !!