ಸಿಂದಗಿಯಲ್ಲಿ ಮಕ್ಕಳ ಹಕ್ಕುಗಳ ದಿನಾಚರಣೆ

447

ಸಿಂದಗಿ: ಪಟ್ಟಣದ ಆಕ್ಸ್ ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಕ್ಕಳ ಕಲ್ಯಾಣ ಪ್ರತಿಷ್ಠಾನ ವತಿಯಿಂದ ಮಕ್ಕಳ ಹಕ್ಕುಗಳ ದಿನಾಚರಣೆ ಆಚರಿಸಲಾಯ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತ್ನಾಡಿದ ವಿದ್ಯಾರ್ಥಿನಿ ನಂದಿನಿ ಕುಂಬಾರ, ಮಕ್ಕಳನ್ನ ಅವರ ಜೀವನದಲ್ಲಿ ಮತ್ತು ಸಮುದಾಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಿದಾಗ ಮಾತ್ರ ಮಕ್ಕಳ ಹಕ್ಕುಗಳಿಗೆ ಮೌಲ್ಯಬರುತ್ತದೆ ಅಂತಾ ಹೇಳಿದರು.

ಅಧ್ಯಕ್ಷತೆ ವಹಿಸಿದ ವಿದ್ಯಾರ್ಥಿ ಶ್ರೀಶೈಲ ಬಿರಾದಾರ ಮಾತನಾಡಿ, 18 ವರ್ಷದೊಳಗಿನ ಪ್ರತಿ ಮಗುವಿಗೆ ಹಕ್ಕುಗಳಿವೆ. ಮಕ್ಕಳು ಹಕ್ಕುಗಳು ನಮಗೆ ಪೂರ್ಣ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತವೆ ಅಂತಾ ಹೇಳಿದರು.

ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ ಮಾತನಾಡಿ, ಮಕ್ಕಳ ಭಾವನೆಗಳನ್ನ, ಮುಗ್ಧತೆ ಅರ್ಥಮಾಡಿಕೊಳ್ಳುವಂತಹ ಮನೋಭಾವನೆ ಪಾಲಕರು, ಶಿಕ್ಷಕರು ಬೆಳೆಸಿಕೊಳ್ಳಬೇಕು. ಮಕ್ಕಳ ಸಮಸ್ಯೆಗಳನ್ನು ಅವಲೋಕಿಸಿ 1989ರ ನವೆಂಬರ್‌ ನಲ್ಲಿ ಮಕ್ಕಳ ಹಕ್ಕುಗಳನ್ನು ಅಂಗಿಕರಿಸಿದೆ ಅಂತಾ ತಿಳಿಸಿದ್ರು.

ಕಾರ್ಯದರ್ಶಿ ಜ್ಯೋತಿ ರಮೇಶ ಪೂಜಾರ, ಮುಖ್ಯಗುರು ವಿಶ್ವನಾಥ ಯಾತನೂರ, ಶಿಕ್ಷಕರಾದ ಬಸಲಿಂಗ ಹದ್ನೂರ, ರೇಣುಕಾ ಅಂಗಡಿ, ರಾಘವೇಂದ ಕೋಣಶಿರಸಗಿ ಉಪಸ್ಥಿತಿಯಿದ್ರು. ವಿದ್ಯಾರ್ಥಿನಿ ಲಕ್ಷ್ಮಿ ಕುಡಕಿ ಪ್ರಾರ್ಥನೆ ಗೀತೆ ಹಾಡಿದರು. ಪೂಜಾ ಹಂಗರಗಿ ಸ್ವಾಗತಿಸಿದರು. ಸ್ವಾತಿ ಪಾಟೀಲ ನಿರೂಪಿಸಿದರು. ದುಂಡಪ್ಪ ನೆಲೋಗಿ ವಂದಿಸಿದರು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!