ಸರ್ಕಾರದಿಂದ ಮಕ್ಕಳ ಯೂಟ್ಯೂಬ್ ಚಾನೆಲ್: ಸಿಎಂ ಚಾಲನೆ

477

ಬೆಂಗಳೂರು: ಕರೋನಾ ಲಾಕ್ ಡೌನ್ ದಿಂದಾಗಿ ಎಲ್ಲ ಶಿಕ್ಷಣ ಸಂಸ್ಥೆಗಳು ಕ್ಲೋಸ್ ಆಗಿವೆ. ಹೀಗಾಗಿ ರಜೆಯಲ್ಲಿ ಮನೆಯಲ್ಲಿರುವ ಮಕ್ಕಳ ಸಲುವಾಗಿ ಸರ್ಕಾರದಿಂದ ಮಕ್ಕಳ ಯೂಟ್ಯೂಬ್ ಚಾನೆಲ್ ಓಪನ್ ಮಾಡಲಾಗಿದೆ. ಇದಕ್ಕೆ ಇಂದು ಸಿಎಂ ಚಾಲನೆ ನೀಡಿದ್ದಾರೆ.

ಮಕ್ಕಳ ವಾಣಿ ಹೆಸರಿನ ಯೂಟ್ಯೂಬ್ ಚಾನೆಲ್ ನ್ನ ಸಿಎಂ ಬಿ.ಎಸ್ ಯಡಿಯೂರಪ್ಪ, ಗೃಹ ಕಚೇರಿ ಕೃಷ್ಣಾದಲ್ಲಿ ಲಾಂಚ್ ಮಾಡಿದ್ದಾರೆ. ಶಿಕ್ಷಣ ಇಲಾಖೆ ಹೊಸ ಪ್ರಯತ್ನ ಮಾಡುವ ಮೂಲಕ, ಮಕ್ಕಳಿಗೆ ಶೈಕ್ಷಣಿಕ ಮಾಹಿತಿ, ಮನೋರಂಜನಾ ಚಟುವಟಿಕೆ ನೀಡಲಾಗುತ್ತೆ.

1 ಗಂಟೆಯ ಕಾರ್ಯಕ್ರಮದಲ್ಲಿ ಕಥೆ, ಹಾಡು, ಕಿರು ನಾಟಕ, ಚಿತ್ರಕಲೆ, ಸಂಗೀತ, ಕ್ರಾಪ್ಟ್, ಒಗಟು, ಗಾದೆ, ಪದಬಂಧ, ಮ್ಯಾಜಿಕ್ ಸೇರಿದಂತೆ ಹಲವು ಮಾಹಿತಪೂರ್ಣ ವಿಷಯಗಳನ್ನ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದರಲ್ಲಿ ಮಕ್ಕಳು, ಪೋಷಕರು ಸಹ ಪಾಲ್ಗೊಳ್ಳಬಹುದು. ವಿಡಿಯೋಗಳನ್ನ ಕಳುಹಿಸಿದ್ರೆ ಮಕ್ಕಳ ವಾಣಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!