ಯೂಟ್ಯೂಬ್ ನಲ್ಲಿ ಇನ್ಮುಂದೆ ಇದಕ್ಕಿಲ್ಲ ಅವಕಾಶ

275

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಇಂದಿನ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರಂಗಳಲ್ಲಿ ಯೂಟ್ಯೂಬ್ ಸಹ ಹೆಚ್ಚು ಬಳಕೆಯಲ್ಲಿದೆ. ಪ್ರತಿಯೊಂದು ವಿಷಯಕ್ಕೂ ಯೂಟ್ಯೂಬ್ ನಲ್ಲಿ ಹುಡುಕಲು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇನ್ಮುಂದೆ ಇಂತಹ ವಿಷಯಗಳು ಯೂಟ್ಯೂಬ್ ನಲ್ಲಿ ಸಿಗುವುದಿಲ್ಲ.

ಯೂಟ್ಯೂಬ್ ನಲ್ಲಿ ಬರುವ ಮಾಹಿತಿ ಸತ್ಯ ಎಂದು ನಂಬಿ ಅನೇಕರು ತಮ್ಮ ಆರೋಗ್ಯ, ಸೌಂದರ್ಯ ಹಾಳು ಮಾಡಿಕೊಂಡವರು ಇದ್ದಾರೆ. ಹೀಗಾಗಿ ವೈದ್ಯಕೀಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಳ್ಳುವ ವಿಡಿಯೋಗಳಿಗೆ ಬ್ರೇಕ್ ಬೀಳಲಿದೆ. ಆಗಸ್ಟ್ 15ರಿಂದ ಈ ಪ್ರಕ್ರಿಯೆ ಶುರುವಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಸಣ್ಣಪುಟ್ಟ ಕಾಯಿಲೆಯಿಂದ ಗಂಭೀರ ಕಾಯಿಲೆ ತನಕ ಹಲವು ಮಾಹಿತಿಗಳನ್ನು ನೀಡುವ ಸಾಕಷ್ಟು ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ನೋಡುತ್ತಿರುತ್ತೇವೆ. ಡಬ್ಲುಹೆಚ್ ಓ(ವಿಶ್ವ ಆರೋಗ್ಯ ಸಂಸ್ಥೆ) ಅಥವ ಸ್ಥಳೀಯ ಆರೋಗ್ಯ ಅಧಿಕಾರಿಗಳ ಮಾರ್ಗಸೂಚಿಗೆ ವಿರುದ್ಧವಾಗಿರುವ ವಿಡಿಯೋಗಳನ್ನು ಗುರುತಿಸಿ ತೆಗೆದು ಹಾಕುವ ಕೆಲಸ ನಡೆದಿದೆ.

ಮಕ್ಕಳು, ಮಹಿಳೆಯರು, ಪುರುಷರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋಗಳು ಸಿಗುತ್ತವೆ. ಇದರಲ್ಲಿ ತಪ್ಪು ಮಾಹಿತಿ, ಅಡ್ಡಪರಿಣಾಮ ಬೀರುವ, ನಿಯಮಗಳಿಗೆ ವಿರುದ್ಧವಾಗಿರುವ ವಿಡಿಯೋಗಳನ್ನು ಗುರುತಿಸಿ ತೆಗೆದು ಹಾಕುವ ಮೂಲಕ, ಸಾರ್ವಜನಿಕರ ಸುರಕ್ಷಿತ ದೃಷ್ಟಿಯಿಂದ ಇಂತಹದೊಂದು ಕೆಲಸಕ್ಕೆ ಯೂಟ್ಯೂಬ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಇದು ತುಂಬಾ ಅವಶ್ಯಕವಾಗಿದ್ದು ಸಹ ಆಗಿದೆ.




Leave a Reply

Your email address will not be published. Required fields are marked *

error: Content is protected !!