ರಾಮನಗರ ಬಳಿಕ ಮಂಡ್ಯದಲ್ಲಿ 3 ಚಿರತೆ ಪ್ರತ್ಯಕ್ಷ

382

ಮಂಡ್ಯ: ಶುಕ್ರವಾರ ರಾತ್ರಿ ರಾಮನಗರದಲ್ಲಿ 3 ವರ್ಷದ ಮಗುವೊಂದನ್ನ ಕೊಂದು ತಿಂದಿದ್ದ ಚಿರತೆ ಘಟನೆ ಮಾಸುವ ಮುನ್ನವೇ, ಇದೀಗ ಮಂಡ್ಯದಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಇದ್ರಿಂದಾಗಿ ಜನರಲ್ಲಿ ಭಯ ಮೂಡಿದೆ.

ಮಂಡ್ಯ ತಾಲೂಕು ಬಸರಾಳು ಹೋಬಳಿ ಭವಾನಿ ಕೊಪ್ಪಲು ಗ್ರಾಮದ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ಶನಿವಾರ ರಾತ್ರಿ ಕಾಣಿಸಿಕೊಂಡಿವೆ. ಇದರಿಂದ ಈ ಭಾಗದ ಜನರು ಭಯಭೀತಗೊಂಡಿದ್ದಾರೆ. ನಿನ್ನೆ ರಾತ್ರಿ ಭವಾನಿ ಕೊಪ್ಪಲು ಗ್ರಾಮದ ಯುವಕರು ದೊಡ್ಡ ಗರುಡನ ಹಳ್ಳಿಯಿಂದ ಗ್ರಾಮಕ್ಕೆ ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿವೆ. ಇದ್ರಿಂದಾಗಿ ಯುವಕರು ಭಯದಿಂದ ಅದ್ಹೇಗೋ ಎಸ್ಕೇಪ್ ಆಗಿದ್ದಾರೆ.

ಚಿರತೆ ಹಾವಳಿ ಹೆಚ್ಚಾದ ಬಗ್ಗೆ ಮಂಡ್ಯ ಅರಣ್ಯಾಧಿಕಾರಿಗಳಿಗೆ ಫೋನಿನ ಮೂಲಕ ವಿಷಯ ತಿಳಿಸಿದ್ರೂ, ಈ ಬಗ್ಗೆ ಯಾವುದೇ ಕ್ರಮಗಳನ್ನ ತೆಗೆದುಕೊಳ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿಯಲ್ಲಿ ಹೊಲಗಳಿಗೆ ನೀರೂಣಿಸಲು ಹೋದಾಗ ರೈತರ, ಗ್ರಾಮಸ್ಥರ ಜೀವಗಳು ಹಾನಿಯಾದ್ರೆ ಯಾರು ಜವಾಬ್ದಾರರು ಎಂದು ಕೇಳ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!