ಚಾಕೋಲೇಟ್ ತಿನ್ನುವ ಮುನ್ನ ಹುಷಾರ್

236

ಪ್ರಜಾಸ್ತ್ರ ಸುದ್ದಿ

ಕೋಲಾರ: ಚಾಕೋಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಚಾಕೋಲೇಟ್ ಇಷ್ಟ ಪಡ್ತಾರೆ. ಆದ್ರೆ, ಹೀಗೆ ಇಷ್ಟುಪಟ್ಟು ತಿನ್ನುವ ಚಾಕೋಲೇಟ್ ಒಮ್ಮೊಮ್ಮೆ ಮುಳ್ಳಾಗುತ್ತೆ. ಕೆಜಿಎಫ್ ನಗರದ ಎಸ್.ಟಿ ಬ್ಲಾಕ್ ನಿವಾಸಿ ಸಿಲಂಬರಸನ್ ಎಂಬುವರ ಮಗ ಲಚ್ಚನ್(6) ಚಾಕೋಲೇಟ್ ತಿಂದು ಆಸ್ಪತ್ರೆ ಸೇರಿದ್ದಾನೆ.

ಚಾಕೋಲೇಟ್ ತಿಂದ ಲಚ್ಚನ್ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾನೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಆಗ ಫುಡ್ ಪಾಯಿಸನ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹುಡುಗನಿಗೆ ಕೇಳಿದ್ರೆ ಚಾಕೋಲೇಟ್ ತಿಂದಿರುವುದಾಗಿ ಹೇಳಿದ್ದಾನೆ. ಅವನು ಖರೀದಿಸಿದ ಅಂಗಡಿಗೆ ಹೋಗಿ ವಿಚಾರಿಸಿದಾಗ ಡೇಟ್ ಎಕ್ಸ್ ಪೈರ್ ಆಗಿರುವುದು ತಿಳಿದು ಬಂದಿದೆ.

ಪ್ಯಾಕಿಂಗ್ ವಸ್ತುಗಳನ್ನ ಖರೀದಿಸುವಾಗ ಎಚ್ಚರಿಕೆಯಿಂದ ಇರಿ. ಡೇಟ್ ಎಕ್ಸ್ ಪೈರ್ ಆಗಿರುವ ಯಾವುದೇ ವಸ್ತುಗಳಾದ್ರೂ ಜೀವಕ್ಕೆ ಹಾನಿಕಾರಿಕ. ಇದೀಗ ಲಚ್ಚನ್ ಪೋಷಕರು ಅಂಗಡಿಯವನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!