ಆಲ್ ರೌಂಡರ್ ಕ್ರಿಸ್ ಮೋರಿಸ್ ನಿವೃತ್ತಿ ಘೋಷಣೆ

204

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೌಥ್ ಆಫ್ರಿಕಾ ತಂಡದ ಆಲ್ ರೌಂಡರ್ 34 ವರ್ಷದ ಕ್ರಿಸ್ ಮೋರಿಸ್ ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ವೇಳೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

42 ಏಕದಿನ ಪಂದ್ಯಗಳಲ್ಲಿ 468 ರನ್, 48 ವಿಕೆಟ್ ಪಡೆದಿದ್ದಾರೆ. 23 ಟಿ-20 ಪಂದ್ಯಗಳಿಂದ 133 ರನ್, 34 ವಿಕೆಟ್ ಗಳಿಸಿದ್ದಾರೆ. ಇನ್ನು 4 ಟೆಸ್ಟ್ ಪಂದ್ಯಗಳಲ್ಲಿ 173 ರನ್ ಹಾಗೂ 12 ವಿಕೆಟ್ ಪಡೆದಿದ್ದಾರೆ. ಇನ್ನು 81 ಐಪಿಎಲ್ ಪಂದ್ಯಗಳಿಂದ 618 ರನ್, 95 ವಿಕೆಟ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಒಂದು ರೀತಿಯಲ್ಲಿ ಫನ್ ರೈಡ್ ಆಗಿತ್ತು. ಈ ಪಯಣದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇನ್ಮುಂದೆ ಟೈಟಾನ್ಸ್ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!