ಪೈರಸಿ ಭೂತ ಅನ್ನೋದು ಯಾವ ಸಿನ್ಮಾ ರಂಗವನ್ನೂ ಬಿಟ್ಟಿಲ್ಲ. ವಿಶ್ವ ಸಿನಿ ದುನಿಯಾವನ್ನ ಕಾಡ್ತಿರುವ ಭೂತ. ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೌಂಡ್ ಮಾಡ್ತಿದೆ. ನಟ ಸುದೀಪ ಅಭಿನಯದ ಪೈಲ್ವಾನ್ ಮೂವಿ ಪೈರಸಿಯಿಂದಾಗಿ ದೊಡ್ಡ ಚರ್ಚೆ ನಡೆದಿದೆ.
ಈ ಬಗ್ಗೆ ಮಾತ್ನಾಡಿರುವ ನಟ ಜಗ್ಗೇಶ, ಪೈರಸಿ ಇನ್ ಸೈಡ್ ಹೇಳಿದ್ದಾರೆ. ಇದನ್ನ ಓದಿದ ಜನ ಹೀಗೆಲ್ಲಾ ಆಗುತ್ತಾ ಅಂತಿದ್ದಾರೆ. ದುಡ್ಡು ಕೊಟ್ಟು ಪೈರಸಿ ಮಾಡಿಸುವುದು, ಅದನ್ನ ಬೇಡ ಅಂತಾ ಹೇಳುವುದೆಲ್ಲ ನಡೆಯುತ್ತಿದ್ಯಾ ಅಂತಾ ಅಚ್ಚರಿಯಿಂದ ಕೇಳ್ತಿದ್ದಾರೆ.