ದೋಸ್ತಿ ಸರ್ಕಾರ ಖತಂ.. ಬಿಜೆಪಿ ಸೇರಿ ಅ‘ತೃಪ್ತ’ರ ದಿಲ್ ಖುಷ್

524

ಬೆಂಗಳೂರು: ಕಡೆಗೂ 14 ತಿಂಗಳ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಪತನಗೊಂಡಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ನಡೆದ ಹೈಡ್ರಾಮಕ್ಕೆ ಇಂದು ತೆರೆ ಬಿದ್ದಿದೆ. ಸುಮಾರು 7.20ರ ಟೈಂನಲ್ಲಿ ವೋಟಿಂಗ್ ಕಾರ್ಯ ನಡೆಯಿತು.

ಒಟ್ಟು 20 ಶಾಸಕರು ಗೈರಾದ ಕಾರಣ 224 ಸದಸ್ಯರ ಸದನದ ಸಂಖ್ಯಾಬಲ 204ಕ್ಕೆ ಕುಸಿದಿತ್ತು. ಬಿಜೆಪಿ ಪರ 105, ದೋಸ್ತಿ ಸರ್ಕಾರದ ಪರ 99 ಮತಗಳು ಬಿದ್ವು. ಪ್ರಸ್ತಾವದ ಪರ ಹಾಗೂ ವಿರೋಧ ಇರುವವರ ಮತ ಎಣಿಕೆ ಕಾರ್ಯ ನಡೆಯಿತು. ಮ್ಯಾಜಿಕ್ ನಂಬರ್ 103ನ್ನು ಬಿಜೆಪಿ ಕ್ರಾಸ್ ಮಾಡಿತು. ಹೀಗಾಗಿ ಮತ ಎಣಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಕುಮಾರಸ್ವಾಮಿ ಅವರು ಮಂಡಿಸಿದ್ದ ಮತದಾನದಲ್ಲಿ ಪ್ರಸ್ತಾವ ಬಿದ್ದು ಹೋಗಿದೆ ಅಂತಾ ಸ್ಪೀಕರ್ ಹೇಳಿದ್ರು. ಸರ್ಕಾರದ ಪರ 99, ವಿರುದ್ಧವಾಗಿ 105 ಮತಗಳು ಬಿದ್ವು.

ವಿಶ್ವಾಸಮತ ಯಾಚನೆ ಟೈಂನಲ್ಲಿ ದೋಸ್ತಿ ಸರ್ಕಾರದ ನಾಯಕರು ಸುದೀರ್ಘ ಭಾಷಣ ಮಾಡುವ ಮೂಲಕ, ಬಿಜೆಪಿ ಹೊರಟ ಹಾದಿ ಸರಿಯಲ್ಲ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಹೊರಟಿದೆ ಅಂತಾ ಹೇಳಿದ್ರು.

ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ನಾಡಿ, ನಮ್ಮ ಶಾಸಕರನ್ನ ಬಿಜೆಪಿ ಹೋಲ್ ಸೇಲ್ ಆಗಿ ಖರೀದಿ ಮಾಡಿದೆ. ಇದು ಸರಿಯಲ್ಲ. ಒಂದು ವರ್ಷ, ಆರು ತಿಂಗಳಲ್ಲಿ ಬಿ.ಎಸ್ ಯಡಿಯೂರಪ್ಪನವರಿಗೆ ಇದೇ ಸ್ಥಿತಿ ಬರುತ್ತೆ ಅಂತಾ ಚುಚ್ಚಿದ್ರು.

ಬಳಿಕ ಮಾತ್ನಾಡಿದ ಸಿಎಂ ಕುಮಾರಸ್ವಾಮಿ, ನಾಲ್ಕು ದಿನ ನಡೆದ ಕಲಾಪದಲ್ಲಿ ಏನೆಲ್ಲಾ ಆಯ್ತು ಅನ್ನೋದು ಹೇಳಿದ್ರು. ಇದನ್ನ ನೋಡಿದ ನಾಡಿನ ಜನತೆ ನಮ್ಮ ಕ್ಷಮಿಸಲಾರರು ಅಂತಾ ಹೇಳಿದ್ರು. ಸದನದಲ್ಲಿ ವಿರೋಧ ಪಕ್ಷದವರು ಚರ್ಚೆ ಮಾಡದೆ ಇರೋದು ನಾನು ಯಾವುತ್ತೂ ನೋಡಿಲ್ಲಂತ ಹೇಳಿದ್ರು. ಇಡೀ ಘಟನೆಯಿಂದ ನಾನು ನೊಂದಿದ್ದೇನೆ. ಇದ್ರಿಂದಾಗಿ ಸ್ಪೀಕರ್ ಅವರಿಗೆ ಅಗೌರವ ತೋರಿಸುವುದಾಗಿರ್ಲಿಲ್ಲ. ಹೀಗಾಗಿ ನಮ್ಮ ನಾಯಕರ ಪರವಾಗಿ ನಿಮ್ಗೆ ಹಾಗೂ ನಾಡಿನ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ ಅಂತಾ ಹೇಳಿದ್ರು.

ನಾನು ವಿಶ್ವಾಸಮತ ಯಾಚನೆ ಸಲುವಾಗಿ ನಾನು ಟೈಂ ತೆಗೆದುಕೊಂಡಿದ್ದು ನಮ್ಮ ಸ್ವಾರ್ಥವಿದೆ. ಅದರ ಉದ್ದೇಶ, ಹೋದ ನಮ್ಮ ಶಾಸಕರು ಪರಿವರ್ತನೆಯಾಗಬಹುದು ಅನ್ನೋ ವಿಶ್ವಾಸದಲ್ಲಿ ಹೀಗೆ ಮಾಡಿದ್ದೇವೆ. ಹೀಗಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಅಂತಾ ಸ್ಪೀಕರ್ ಗೆ ಹೇಳಿದ್ರು. ನನ್ನ ಜೀವನದಲ್ಲಿ ಹಲವಾರು ಸರಿ ತಪ್ಪುಗಳನ್ನು ಮಾಡಿದ್ದೇನೆ. ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಬೋಪಯ್ಯನವರ ಅಂದು ಬಿಜೆಪಿ ಹೇಗೆಲ್ಲ ದುರುಪಯೋಗ ಪಡಿಸಿಕೊಳ್ಳಲಾಯ್ತು ಅನ್ನೋದು ನಾನು ಸಂಸತ್ ನಲ್ಲಿದ್ದಾಗ ನೋಡಿದ್ದೇನೆ.

2018 ಮೇ 23 ರಂದು ಮೈತ್ರಿ ಸರ್ಕಾರ ರಚನೆಯಾಗಿತ್ತು. ಅಂದಿನಿಂದ ವಿರೋಧ ಪಕ್ಷದವರು ನಮ್ಮದು ಅಪಮೈತ್ರಿ ಅಂತಾ ಹೇಳ್ತಾ ಬಂದಿದ್ದಾರೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯ ಕುಟುಂಬದಿಂದ ಬಂದಿದ್ರು, ನಾನು ರಾಜಕೀಯದಿಂದ ದೂರ ಇದ್ದೆ. ನಾನು ಮದುವೆಯಾಗುವ ಟೈಂನಲ್ಲಿ ನನ್ನ ಧರ್ಮಪತ್ನಿ ನಾನು ರಾಜಕಾರಣಿಯನ್ನ ಮದುವೆಯಾಗಲ್ಲಂತ ಹೇಳಿದ್ರು. ಆಕೆಯ ಮಾತು ಮೀರಿ ನಾನು ರಾಜಕೀಯಕ್ಕೆ ಬಂದೆ. ಇವತ್ತು ಅವರು ನನ್ನ ಜೊತೆ ಇಂದು ಸದನಲ್ಲಿದ್ದಾರೆ.

ನನ್ನ ವ್ಯವಹಾರ ಇದ್ದದ್ದು ಚಿತ್ರರಂಗದಲ್ಲಿ ನಿರ್ಮಾಪಕನಾಗಿ. ಆವತ್ತಿನ ವೇಳೆ ನಮ್ಮ ತಂದೆಯವರ ಹೋರಾಟವನ್ನ ನೋಡಿಕೊಂಡು ನಾನು ರಾಜಕೀಯಕ್ಕೆ ಬಂದೆ. ಇದನ್ನ ಕೆಲ ಪತ್ರಿಕೆಯಲ್ಲಿ ಸಹ ಬರೆದಿದ್ದಾರೆ. ಇನ್ನು ಬಿಎಸ್ ವೈ ಅವರ ಹೇಳಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಅಂತಾ ಹೇಳಿದ್ರು. ದೇವಗೌಡರನ್ನ ಅವಮಾನ ಮಾಡ್ಬೇಡಿ. ನನ್ನ ತಂದೆ ಅನ್ನೋ ಕಾರಣಕ್ಕೆ ಈ ಮಾತನ್ನ ಹೇಳ್ತಿಲ್ಲ ಅವರು ಹೋರಾಟದಿಂದ ಬಂದವರು ಅಂತಾ ಹೇಳಿದ್ರು.

ರಾಜಕೀಯದಲ್ಲಿ ನನ್ನ ತಂದೆ ನನ್ಗೆ ವಿರೋಧ. ರೇವಣ್ಣನಿಗೆ ಆಶೀರ್ವಾದ ಇರುತ್ತೆ. ಅವನು ಜಿಲ್ಲಾ ಪಂಚಾಯ್ತಿಯಿಂದ ಬಂದ. ಅವನಿಗೆ ಬೆಂಬಲ. ನಾನು ಲೋಕಸಭೆಗೆ ಬರುವಾಗ ತಂದೆಯವರು ಜೈಲಿನಲ್ಲಿದ್ರು. ನನ್ನ ತಂದೆಯವರು ಬೇಡವೆಂದರು ನಾನು ರಾಜಕೀಯಕ್ಕೆ ಬಂದೆ. ಹೀಗಾಗಿ ನನ್ಗೆ ಅವರ ಆಶೀರ್ವಾದ ಇಲ್ಲ. 1990ರಲ್ಲಿ ಶಿವಕುಮಾರ ವಿರುದ್ಧ ನಿಂತು ಸೋತೆ. ಆಗ ರೇವಣ್ಣರು ಮಂತ್ರಿಯಾಗಿ ಸೋತಿದ್ರು. ದೇವೇಗೌಡರು ಮಾಜಿ ಪ್ರಧಾನಿಯಾಗಿ ಸೋತಿದ್ರು. ನಾನು ಸೋತಿದ್ದೆ. ಆಗ್ಲೇ ನಾನು ರಾಜಕೀಯದಿಂದ ಹಿಂದೆ ಸರಿಬೇಕು ಎಂದಿದ್ದೆ.

ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ ಅಂತಾ ಬಿಜೆಪಿಗೆ ಕುಮಾರಸ್ವಾಮಿ ಮನವಿ ಮಾಡಿದ್ರು. ಸೋಷಿಯಲ್ ಮೀಡಿಯಾ ಇರೋದು ಪ್ರಜಾಪ್ರಭುತ್ವ ಹಾಳು ಮಾಡಲು. ದೇಶದ ಸಂಸ್ಕೃತಿ ಹಾಳು ಮಾಡ್ತಿವೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಹೊಸದಾಗಿ ಶಾಸಕರು ಆದವರು ಕಣ್ಣೀರು ಹಾಕಿ ಸರ್ಕಾರ ಉಳಿಸಿ ಅಂತಾ ಹೇಳಿದ್ರು. ಹೀಗಾಗಿ ಕೊನೆಯ ತನಕ ಪ್ರಯತ್ನ ಪಟ್ಟೆ. ನಾನು ಈ ರಾಜಕೀಯ ಲೂಟಿ ಮಾಡಲು ಕುಳ್ತಿರ್ಲಿಲ್ಲ ಅಂತಾ ಹೇಳಿದ್ರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ನಿಮ್ಮ ಮಾಧ್ಯಮ ಉಳಿಸಲು ದೇಶ ಹಾಳಮಾಡ್ಬೇಡಿ ಅಂತಾ ಎಲೆಕ್ಟ್ರಾನಿಕ್ ಮೀಡಿಯಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು. ಮುದ್ರಣ ಮಾಧ್ಯಮದಲ್ಲಿ ಒಂದಿಷ್ಟು ಒಳ್ಳೆಯದು ಉಳಿದಿದೆ. ಎಲೆಕ್ಟ್ರಾನಿಕ್ ಮೀಡಿಯಾದವರು ವೈಯಕ್ತಿಕ ಜೀವನನ್ನ ಸಹ ಬಿಡ್ತಿಲ್ಲಂತ ಹೇಳಿದ್ರು.

ಪಕ್ಷಕ್ಕೆ ದೋಹ್ರ ಮಾಡಿ ಹೋಗಿರುವ ಶಾಸಕರನ್ನ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲವೆಂದು ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಜಗತ್ತು ಪ್ರಳಯವಾದ್ರೂ ಅವರನ್ನ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲಂತ ಹೇಳಿದ್ರು.

ನನ್ನ ವ್ಯವಹಾರ ಇದ್ದದ್ದು ಚಿತ್ರರಂಗದಲ್ಲಿ ನಿರ್ಮಾಪಕನಾಗಿ. ಆವತ್ತಿನ ವೇಳೆ ನಮ್ಮ ತಂದೆಯವರ ಹೋರಾಟವನ್ನ ನೋಡಿಕೊಂಡು ನಾನು ರಾಜಕೀಯಕ್ಕೆ ಬಂದೆ. ಇದನ್ನ ಕೆಲ ಪತ್ರಿಕೆಯಲ್ಲಿ ಸಹ ಬರೆದಿದ್ದಾರೆ. ಇನ್ನು ಬಿಎಸ್ ವೈ ಅವರ ಹೇಳಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಅಂತಾ ಹೇಳಿದ್ರು. ದೇವಗೌಡರನ್ನ ಅವಮಾನ ಮಾಡ್ಬೇಡಿ. ನನ್ನ ತಂದೆ ಅನ್ನೋ ಕಾರಣಕ್ಕೆ ಈ ಮಾತನ್ನ ಹೇಳ್ತಿಲ್ಲ ಅವರು ಹೋರಾಟದಿಂದ ಬಂದವರು ಅಂತಾ ಹೇಳಿದ್ರು.

ರಾಜಕೀಯದಲ್ಲಿ ನನ್ನ ತಂದೆ ನನ್ಗೆ ವಿರೋಧ. ರೇವಣ್ಣನಿಗೆ ಆಶೀರ್ವಾದ ಇರುತ್ತೆ. ಅವನು ಜಿಲ್ಲಾ ಪಂಚಾಯ್ತಿಯಿಂದ ಬಂದ. ಅವನಿಗೆ ಬೆಂಬಲ. ನಾನು ಲೋಕಸಭೆಗೆ ಬರುವಾಗ ತಂದೆಯವರು ಜೈಲಿನಲ್ಲಿದ್ರು. ನನ್ನ ತಂದೆಯವರು ಬೇಡವೆಂದರು ನಾನು ರಾಜಕೀಯಕ್ಕೆ ಬಂದೆ. ಹೀಗಾಗಿ ನನ್ಗೆ ಅವರ ಆಶೀರ್ವಾದ ಇಲ್ಲ. 1990ರಲ್ಲಿ ಶಿವಕುಮಾರ ವಿರುದ್ಧ ನಿಂತು ಸೋತೆ. ಆಗ ರೇವಣ್ಣರು ಮಂತ್ರಿಯಾಗಿ ಸೋತಿದ್ರು. ದೇವೇಗೌಡರು ಮಾಜಿ ಪ್ರಧಾನಿಯಾಗಿ ಸೋತಿದ್ರು. ನಾನು ಸೋತಿದ್ದೆ. ಆಗ್ಲೇ ನಾನು ರಾಜಕೀಯದಿಂದ ಹಿಂದೆ ಸರಿಬೇಕು ಎಂದಿದ್ದೆ.

ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ ಅಂತಾ ಬಿಜೆಪಿಗೆ ಕುಮಾರಸ್ವಾಮಿ ಮನವಿ ಮಾಡಿದ್ರು. ಸೋಷಿಯಲ್ ಮೀಡಿಯಾ ಇರೋದು ಪ್ರಜಾಪ್ರಭುತ್ವ ಹಾಳು ಮಾಡಲು. ದೇಶದ ಸಂಸ್ಕೃತಿ ಹಾಳು ಮಾಡ್ತಿವೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಹೊಸದಾಗಿ ಶಾಸಕರು ಆದವರು ಕಣ್ಣೀರು ಹಾಕಿ ಸರ್ಕಾರ ಉಳಿಸಿ ಅಂತಾ ಹೇಳಿದ್ರು. ಹೀಗಾಗಿ ಕೊನೆಯ ತನಕ ಪ್ರಯತ್ನ ಪಟ್ಟೆ. ನಾನು ಈ ರಾಜಕೀಯ ಲೂಟಿ ಮಾಡಲು ಕುಳ್ತಿರ್ಲಿಲ್ಲ ಅಂತಾ ಹೇಳಿದ್ರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಯಾರು ನಮ್ಮ ಸರ್ಕಾರದ ವಿರುದ್ಧ ಮುನಿಸಿಕೊಂಡು ಹೋಗಿದ್ದಾರೋ, ಅವರ ಕ್ಷೇತ್ರಗಳಿಗೆ ಎಷ್ಟು ಕೋಟಿ ಅನುದಾನ ಕೊಟ್ಟಿದ್ದೇನೆ ಅನ್ನೋದನ್ನ ಸಿಎಂ ಅಂಕಿಅಂಶಗಳ ಸಮೇತ ಓದಿ ಹೇಳಿದ್ರು. ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದ್ರು.

ನಿಮ್ಮ ಮಾಧ್ಯಮ ಉಳಿಸಲು ದೇಶ ಹಾಳಮಾಡ್ಬೇಡಿ ಅಂತಾ ಎಲೆಕ್ಟ್ರಾನಿಕ್ ಮೀಡಿಯಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು. ಮುದ್ರಣ ಮಾಧ್ಯಮದಲ್ಲಿ ಒಂದಿಷ್ಟು ಒಳ್ಳೆಯದು ಉಳಿದಿದೆ. ಎಲೆಕ್ಟ್ರಾನಿಕ್ ಮೀಡಿಯಾದವರು ವೈಯಕ್ತಿಕ ಜೀವನನ್ನ ಸಹ ಬಿಡ್ತಿಲ್ಲಂತ ಹೇಳಿದ್ರು.

ಇನ್ನು ರೇಸ್ ಕೋರ್ಟ್ ಬಳಿಯಿರುವ ನಿತೀಶ ಅಪಾರ್ಟ್ ಮೆಂಟ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿದ್ರು. ಬಿಜೆಪಿ ವಿರುದ್ಧ ಧಿಕ್ಕಾರಗಳನ್ನು ಕೂಗಿದ ಕಾರ್ಯಕರ್ತರು, ಅಪಾರ್ಟ್ ಮೆಂಟ್ ನಲ್ಲಿ ಪಕ್ಷೇತರ ಶಾಸಕರಿದ್ದು, ಅವರನ್ನ ರಕ್ಷಣೆ ಮಾಡಲು ಬಂದಿದ್ದೇವೆ ಅಂತಾ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು.

TAG

Leave a Reply

Your email address will not be published. Required fields are marked *

error: Content is protected !!