ಹಿರಿಯ ಹಾಸ್ಯನಟ ರಾಜಗೋಪಾಲ ನಿಧನ

372

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಹಿರಿಯ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ಕಿಡ್ನಿ ಹಾಗೂ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ 64 ವರ್ಷದ ಹಾಸ್ಯನಟ ಕೆಂಗೇರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ರೂ, ಇವರಿಗೆ ಅವಕಾಶಗಳು ಇರ್ಲಿಲ್ಲ. ಲಾಕ್ ಡೌನ್ ಟೈಂನಲ್ಲಿ ಸಂಕಷ್ಟ ಎದುರಿಸಿದ ಅವರು, ಖಾಸಗಿ ಸಂಸ್ಥೆಯೊಂದು ಹಿರಿಯ ಕಲಾವಿದರಿಗೆ ನೀಡಿದ ಆಹಾರದ ಕಿಟ್ ಪಡೆದುಕೊಂಡಿದ್ರು. ಕನ್ನಡದಲ್ಲಿ ಹಿರಿಯ ಕಲಾವಿದರಿಗೆ ಅವಕಾಶವಿಲ್ಲ. ಬೇರೆ ಭಾಷೆಗಳಲ್ಲಿ ಹಾಗಲ್ಲ, ಅಲ್ಲಿ ಹಿರಿಯ ಕಲಾವಿದರಿಗೆ ಅವಕಾಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ನೋವು ಹಂಚಿಕೊಂಡಿದ್ರು.

ನಟನೆಯ ಜೊತೆಗೆ ಮಿಮಿಕ್ರಿ ಮಾಡ್ತಿದ್ದ ರಾಜಗೋಪಾಲ ಅವರು, ಕಲ್ಪನಾ ಧ್ವನಿಯ ಮೂಲಕ ಫೇಮಸ್ ಆದ್ರು. ಹೀಗಾಗಿ ಇವರನ್ನ ಮಿಮಿಕ್ರಿ ರಾಜಗೋಪಾಲ ಎಂದೇ ಗುರುತಿಸಲಾಗ್ತಿತ್ತು. ಇಂಥಾ ಹಿರಿಯ ಕಲಾವಿಧ ನಿಧನರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!