ಜಿವಿಕೆ ಗ್ರೂಪ್ ನಿಂದ 705 ಕೋಟಿ ಅವ್ಯವಹಾರ: 9 ಕಂಪನಿಗಳ ವಿರುದ್ಧ ಕೇಸ್

336

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಬರೋಬ್ಬರಿ 705 ಕೋಟಿ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಜಿವಿಕೆ ಗ್ರೂಪ್ ಸೇರಿದಂತೆ 9 ಕಂಪನಿಗಳ ಮೇಲೆ ಸಿಬಿಐ ಕೇಸ್ ದಾಖಲಿಸಿದೆ.

ಜಿವಿಕೆ ಕಂಪನಿ ಅಧ್ಯಕ್ಷ ಗಣಪತಿ ವೆಂಕಟಕೃಷ್ಣ ರೆಡ್ಡಿ, ಇವರ ಪುತ್ರ, ಮುಂಬೈ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ ಸಂಜಯರೆಡ್ಡಿ ಸೇರಿದಂತೆ 9 ಕಂಪನಿಗಳ ವಿರುದ್ಧ ಸಿಬಿಐ ಕೇಸ್ ದಾಖಲಿಸಿಕೊಂಡಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮುಂಬೈ ವಿಮಾನ ನಿಲ್ದಾಣವನ್ನ ಮೇಲ್ದರ್ಜೆಗೆ ಏರಿಸುವ ಮತ್ತು ನಿರ್ವಹಣೆ ಕೆಲಸವನ್ನ ಜಿವಿಕೆಗೆ ನೀಡಲಾಗಿತ್ತು. 2006ರಲ್ಲಿ ಒಪ್ಪಂದವಾಗಿದೆ.

ಆದರೆ, ಜಿವಿಕೆ ಕಂಪನಿಗೆ ಸಂಬಂಧಿಸಿದ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಗೊತ್ತಾಗದ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಮಾಡದೆ ಇರುವ ಕೆಲಸ ಮಾಡಿದೆ ಎಂದು ಹೇಳಿ 310 ಕೋಟಿ ರೂಪಾಯಿಗಳನ್ನ, ತಮಗೆ ಇಷ್ಟವಾದ ಕಂಪನಿಗಳಿಗೆ ವರ್ಗಾಯಿಸಿದ್ದಾರೆ. ಹೀಗೆ 705 ಕೋಟಿ ರೂಪಾಯಿ ಅವ್ಯವಹಾರ ನಡೆಸಿದೆ ಅನ್ನೋ ಆರೋಪ ಕೇಳಿ ಬಂದಿದೆ.




Leave a Reply

Your email address will not be published. Required fields are marked *

error: Content is protected !!