ಕಾಂಗ್ರೆಸ್ಸಿನ ಐಎನ್ ಸಿ ಟಿವಿ ಶುರು

230

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಾಂಗ್ರೆಸ್ ಪಕ್ಷದಿಂದ ಐಎನ್ ಸಿ ಟಿವಿ ಶುರು ಮಾಡಲಾಗಿದೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾದ ಶನಿವಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ವರ್ಚುಲ್ ಮೂಲಕ ಟಿವಿಗೆ ಚಾಲನೆ ನೀಡಿದರು. ಈ ವೇಳೆ ಮಾತ್ನಾಡಿದ ಅವರು, ಈ ಚಾನಲ್ ದೇಶದ ಕಡು ಬಡವರ ಧ್ವನಿಯಾಗಲಿದೆ ಎಂದರು.

ರಾಷ್ಟ್ರದಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಜನರ ಸಮಸ್ಯೆಗಳು ಸರಿಯಾಗಿ ಬಿಂಬಿತವಾಗುತ್ತಿಲ್ಲ. ಸರ್ಕಾರದಿಂದ ದಾಳಿಗೆ ಒಳಗಾಗುತ್ತಿವೆ. ಈ ನಿಟ್ಟಿನಲ್ಲಿ ಜನರೊಂದಿಗೆ ನೇರವಾದ ಸಂಪರ್ಕ ಸಾಧಿಸಲು ಈ ಚಾನಲ್ ಶುರು ಮಾಡಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!