ಸವದಿ ಸೈಡ್ ಲೈನ್ ಗೆ ಭರ್ಜರಿ ಕಸರತ್ತು!

378

ಪ್ರಜಾಸ್ತ್ರಾ ಸುದ್ದಿ

ಬೆಂಗಳೂರು: ಕರೋನಾ ಹಾವಳಿ ನಡುವೆಯೂ ರಾಜ್ಯ ರಾಜಕೀಯದಲ್ಲಿ ಒಂದಿಷ್ಟು ಏರುಪೇರುಗಳು ನಡೆಯುವ ಲಕ್ಷಣಗಳು ಗೋಚರಿಸ್ತಿವೆ. ಯಾಕಂದ್ರೆ, ಡಿಸಿಎಂ ಲಕ್ಷ್ಮಣ ಸವದಿ ಅವರನ್ನ ಸೈಡ್ ಲೈನ್ ಮಾಡಲು ಸಚಿವ ರಮೇಶ ಜಾರಕಿಹೊಳಿ, ನೂತನ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ ಪ್ಲಾನ್ ನಡೆಸಿದ್ದಾರಂತೆ.

ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಸಹಕಾರ ನೀಡಿದ ಶಾಸಕರಲ್ಲಿ ರಮೇಶ ಜಾರಕಿಹೊಳಿ ಮುಂದಾಳತ್ವ ವಹಿಸಿಕೊಂಡಿದ್ರು. ಹೀಗಾಗಿ ಪಟ್ಟು ಬಿಡದೆ ಜಲಸಂಪನ್ಮೂಲ ಖಾತೆಯನ್ನ ಸಹ ಪಡೆದುಕೊಂಡರು. ಈಗ ಡಿಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ಪದೆಪದೆ ಹೈಕಮಾಂಡ್ ಭೇಟಿ ಮಾಡ್ತಿದ್ದಾರೆ ಎಂದು ರಾಜಕೀಯ ಪಡಸಾಲಿಗೆಯಿಂದ ಕೇಳಿ ಬರ್ತಿದೆ.

ಬೆಳಗಾವಿ ರಾಜಕೀಯದಲ್ಲಿ ಲಕ್ಷ್ಮಣ ಸವದಿ ಹಾಗೂ ರಮೇಶ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿಯಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿಯೂ ಈ ಇಬ್ಬರು ನಾಯಕರ ನಡುವೆ ಒಮ್ಮತ ಅಭಿಪ್ರಯಾವಿಲ್ಲ. ಹೀಗಾಗಿ ಸವದಿಯನ್ನ ಕಂಟ್ರೋಲ್ ಮಾಡಲು ರಮೇಶ ಜಾರಕಿಹೊಳಿ ಡಿಸಿಎಂ ಪಟ್ಟ ಏರಲು ಪ್ರಯತ್ನ ನಡೆಸಿದ್ದಾರಂತೆ.

ಇನ್ನು ಕಾಂಗ್ರೆಸ್ ನಲ್ಲಿ ಡಿ.ಕೆ ಶಿವಕುಮಾರ ಏರುಗತಿಯಲ್ಲಿ ಹೊರಟಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕನ ಓಟಕ್ಕೆ ಬ್ರೇಕ್ ಹಾಕಲು, ಸಿ.ಪಿ ಯೋಗೇಶ್ವರನನ್ನ ಮತ್ತೊಬ್ಬ ಪ್ರಬಲ ನಾಯಕ ಮಾಡಲು ಪ್ಲಾನ್ ಮಾಡಲಾಗಿದೆಯಂತೆ. ಡಿಕೆಶಿ ಹಾಗೂ ಯೋಗೇಶ್ವರ ನಡುವೆ ಮೊದಲಿನಿಂದಲೂ ಉತ್ತಮ ಸಂಬಂಧವಿಲ್ಲ. ಈಗ ಯೋಗೇಶ್ವರಿಗೆ ಸಚಿವ ಸ್ಥಾನ ನೀಡುವ ಮೂಲಕ ಡಿಕೆಶಿ ವಿರುದ್ಧ ಪೈಪೋಟಿ ನಡೆಸಲು ದೆಹಲಿ ನಾಯಕರ ಬಾಗಿಲು ಬಡೆಯುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಈ ಗಾಳಿ ಯಾರ ಪರವಾಗಿರುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!