ಸ್ವಚ್ ಸರ್ವೇಕ್ಷನ್ 2020 ಫಲಿತಾಂಶ

269

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಸ್ಚಚ್ ಸರ್ವೇಕ್ಷನ್ 2020 ವಾರ್ಷಿಕ ಸಮೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. 2016ರಲ್ಲಿ ಪಿಎಂ ಮೋದಿ ಪರಿಚಯಿಸಿದ ಸಮೀಕ್ಷೆ ಇದಾಗಿದೆ.

ಕಳೆದ ಮಂಗಳವಾರ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಕರೋನಾ ಸಮಸ್ಯೆಯಿಂದಾಗಿ ಈ ಬಾರಿಯ ಫಲಿತಾಂಶ ವಿಳಂಬವಾಗಿದೆ. ಇದೀಗ 28 ದಿನಗಳ ಸಮೀಕ್ಷೆ ಪೂರ್ಣಗೊಂಡಿದೆ. ಪ್ರಧಾನಿ ಇಂದು ರಿಸಲ್ಟ್ ಹೇಳಲಿದ್ದಾರೆ. ‘ಸ್ವಚ್ ಮಹೋತ್ಸವ’ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಉತ್ತಮ ಪ್ರದರ್ಶನ ನೀಡಿದ ನಗರ ಹಾಗೂ ರಾಜ್ಯಗಳಿಗೆ ಪ್ರಶಸ್ತಿ ಘೋಷಣೆ ಮಾಡಲಿದ್ದಾರೆ.

ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಈ ಕಾರ್ಯಕ್ರಮ ಆಯೋಜಿಸಿದೆ. ಲೈವ್ ಕಾರ್ಯಕ್ರಮದ ಮೂಲಕ ಪ್ರಧಾನಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!