ಗೋಲ್ಡನ್ ಬಾಬಾ ಸಾವು

398

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೆಜಿಗಟ್ಟಲೇ ಮೈಮೇಲೆ ಬಂಗಾರವನ್ನ ಹಾಕಿಕೊಳ್ತಿದ್ದ ಗೋಲ್ಡನ್ ಬಾಬಾ ನಿಧನರಾಗಿದ್ದಾರೆ. ಗೋಲ್ಡನ್ ಬಾಬಾ ಖ್ಯಾತಿಯ ಸುಧೀರಕುಮಾರ ದೆಹಲಿಯಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

58 ವರ್ಷದ ಗೋಲ್ಡನ್ ಬಾಬಾ,ಮೈಮೇಲೆ ಸುಮಾರು 20 ಕೆಜಿಯಷ್ಟು ಬಂಗಾರವನ್ನ ಹಾಕಿಕೊಳ್ತಿದ್ರು. ಇಂಥಾ ಬಾಬಾ ಹಲವು ವರ್ಷಗಳಿಂದ ಕ್ಯಾನ್ಸರ್, ಮಧುಮೇಹ ಹಾಗೂ ಥೈರಾಯಿಡ್ ಕಾಯಿಲೆಯಿಂದ ಬಳಲುತ್ತಿದ್ರು. ಹೀಗಾಗಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ ಗಾಜಿಯಾಬಾದ್ ಮೂಲದ ಗೋಲ್ಡನ್ ಬಾಬಾ, ದೆಹಲಿಯ ಗಾಂಧಿನಗರದಲ್ಲಿ ವಾಸವಾಗಿದ್ರು. ಮೊದಲು ಬಟ್ಟೆ ವ್ಯಾಪಾರಿಯಾಗಿದ್ದ ಸುಧೀರಕುಮಾರ ನಂತರದ ದಿನಗಳಲ್ಲಿ ಸ್ವಾಮೀಜಿಯಾಗಿದ್ರು. ಇವರಿಗೆ ಚಿನ್ನದ ಮೇಲೆ ಸಾಕಷ್ಟು ವ್ಯಾಮೋಹ ಇದ್ದ ಕಾರಣಕ್ಕೆ, ಮೈಮೇಲೆ ಸದಾ 20 ಕೆಜಿಯಷ್ಟು ಚಿನ್ನದ ಆಭರಣಗಳನ್ನ ಹಾಕಿಕೊಳ್ತಿದ್ರು.




Leave a Reply

Your email address will not be published. Required fields are marked *

error: Content is protected !!