ಪ್ರಜಾಸ್ತ್ರ ಸುದ್ದಿ
ಮಡಿಕೇರಿ: ಕಳೆದ ಮೇ 16ರಂದು ಕೋವಿಡ್ ನಿಂದ ತಾಯಿಯನ್ನ ಕಳೆದುಕೊಂಡ ಬಾಲಕಿ, ಆಕೆಯ ಮೊಬೈಲ್ ಕಳೆದ ಬಗ್ಗೆ ಪತ್ರ ಬರೆದಿದ್ದಾಳೆ. ಜಿಲ್ಲಾಧಿಕಾರಿ, ಶಾಸಕರಿಗೆ ಪತ್ರ ಬರೆದಿರುವ ಬಾಲಕಿ, ತಾಯಿ ಜೊತೆಗಿನ ನೆನಪುಗಳು ಆ ಮೊಬೈಲ್ ನಲ್ಲಿವೆ. ಅದನ್ನು ಹುಡುಕಿಸಿಕೊಡಿ ಎಂದು ಕೇಳಿದ್ಳು.
ಇದೀಗ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಬಾಲಕಿ ಹೃತೀಕ್ಷಾಗೆ ಹೊಸ ಮೊಬೈಲ್ ಕೊಡಿಸಿದೆ. ಇದು ಸಹ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆದಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ. ಬಾಲಕಿಯ ನೆನಪುಗಳು ಇರುವುದು ಆಕೆ ತಾಯಿಯ ಹಳೆ ಫೋನಿನಲ್ಲಿ. ಇದನ್ನ ಹಡುಕಿಕೊಡಲು ಕೇಳಿದ್ದು, ಹೊಸ ಫೋನ್ ಜೊತೆಗೆ ಆಕೆಯ ಭಾವನಾತ್ಮಕ ಸಂಬಂಧ ಇಲ್ಲ ಎಂದಿದ್ದಾರೆ