ಇಂಡಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ದುರ್ಬಳಕೆ ಆರೋಪ

550

ಪ್ರಜಾಸ್ತ್ರ ಸುದ್ದಿ

ಇಂಡಿ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಸಂಬಂಧ ಹಲವಾರು ಯೋಜನೆಗಳನ್ನ ಜಾರಿಗೆ ತರಲಾಗಿದೆ. ಅದರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಒಂದಾಗಿದೆ. ಆದ್ರೆ, ಇದು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಅನ್ನೋ ಗಂಭೀರ ಆರೋಪ ಮಾಡಲಾಗಿದೆ.

ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡದೆ ಯಂತ್ರೋಪಕರಣಗಳನ್ನ ಬಳಸಿ ಕಾಮಗಾರ ಮಾಡಲಾಗ್ತಿದೆ. ಹಳ್ಳದ ಹೂಳೆತ್ತುವ ಕಾಮಗಾರಿಗೆ ಬೃಹತ್ ಯಂತ್ರ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಸದಸ್ಯರು ಸದರಿ ಯೋಜನೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಗ್ರಾಮಸ್ಥ ಮಂಜುನಾಥ ಮೂಲಿಮನಿ ಆರೋಪಿಸಿದ್ದಾರೆ.

ತಡವಲಗಾ ಹಳ್ಳ, ತಾಳಿಕೋಟಿ ಹಳ್ಳ ಹಾಗೂ ಮಾಳಿ ಹಳ್ಳದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಶೇಕಡ 10 ರಷ್ಟು ಯಂತ್ರೋಪಕರಣ ಬಳಸಲು ಅವಕಾಶ ಇದೆ. ಆದರೆ, ಇಡೀ ಕಾಮಗಾರಿಯನ್ನ ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಮಾಡಲಾಗ್ತಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!