ಅರ್ಚಕರ ಹತ್ಯೆ ಪ್ರಕರಣ: ಜಿಹಾದಿಗಳ ಕೃತ್ಯ ಎಂದಿದ್ರಿ.. ಸಿಕ್ಕವರು ಯಾರು ನೋಡಿ..

499

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಕಳೆದ ಶುಕ್ರವಾರ ಅರಕೇಶ್ವರ ದೇವಸ್ಥಾನದ ಮೂವರು ಅರ್ಚಕರನ್ನ ಹತ್ಯೆ ಮಾಡಿ ಹುಂಡಿ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರನ್ನ ಬಂಧಿಸಲಾಗಿದೆ. ಆಂಧ್ರ ಪ್ರದೇಶದ ವಿಜಿ, ಅರೆಕಲ್ ದೊಡ್ಡಿ ಗ್ರಾಮದ ಗಾಂಧಿ, ತಪ್ಪನಹಳ್ಳಿ ಗ್ರಾಮದ ಮಂಜ ಬಂಧಿತ ಆರೋಪಿಗಳಾಗಿದ್ದಾರೆ.

ಈ ಘಟನೆ ಜಿಲ್ಲೆಯಲ್ಲಿ ಭಾರೀ ಆತಂಕ ಮೂಡಿಸಿತ್ತು. ಸಿಪಿಐ ಎನ್.ವಿ ಮಹೇಶ ಹಾಗೂ ಪಿಎಸ್ಐ ಶರತಕುಮಾರ ಅವರ ನೇತೃತ್ವದ ತಂಡ ರಚಿಸಲಾಗಿತ್ತು. ಈ ಟೀಂಗೆ ಕಳೆದ ರಾತ್ರಿ ಮದ್ದೂರು ತಾಲೂಕಿನ ಸಾದೊಳಲು ಗೇಟ್ ಬಳಿ ಆರೋಪಿಗಳು ಇರುವ ಮಾಹಿತಿ ಸಿಗುತ್ತೆ. ಅಲ್ಲಿಗೆ ತೆರಳಿ ಬಂಧಿಸಲು ಹೋದಾಗ, ಆರೋಪಿಗಳು ಪೊಲೀಸರ ಮೇಲೆ ಕಲ್ಲು ಹಾಗೂ ಚಾಕುವಿನಿಂದ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಈ ವೇಳೆ ಪಿಎಸ್ಐ ಶರತಕುಮಾರ, ಸಿಬ್ಬಂದಿ ಅನಿಲಕುಮಾರ, ಕೃಷ್ಣಕುಮಾರ ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ

ಬಳಿಕ ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ಮೊದ್ಲು ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಘಟನೆ ಸಂಬಂಧ ಮಾತ್ನಾಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು, ಇದೊಂದು ಹುಂಡಿ ಹಣಕ್ಕೆ ನಡೆದ ಹತ್ಯೆ ಅನ್ನೋ ಅನುಮಾನವಿದೆ. ಜಿಹಾದಿಗಳ ಕೃತ್ಯ ಇರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಅಂದಿದರು. ಈಗ ಇದಕ್ಕೆ ಏನ್ ಹೇಳ್ತಾರೋ. ಹಂತಕರು ಯಾರೆ ಇರಲಿ ಅವರು ಹಂತಕರೆ. ಅದರಲ್ಲಿ ಜಾತಿ, ಧರ್ಮ ಹುಡುಕುವುದು ಸರಿಯಲ್ಲ.




Leave a Reply

Your email address will not be published. Required fields are marked *

error: Content is protected !!