ಮೋದಿ ಕಾರ್ಯಕ್ರಮ: ಮಗು ಕಪ್ಪು ಟೀ ಶರ್ಟ್ ಹಾಕಿದ್ದನ್ನು ಬಿಚ್ಚಿಸಿದ ಪೊಲೀಸರು

186

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗದ ದಶಪಥ ರಸ್ತೆಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಈ ವೇಳೆ ಮಗುವೊಂದು ಹಾಕಿದ್ದ ಟೀ ಶರ್ಟ್ ನ್ನು ಪೊಲೀಸರು ಬಿಚ್ಚಿಸಿರುವ ಘಟನೆ ನಡೆದಿದೆ.

ತಾಯಿಯೊಂದಿಗೆ ಬಂದಿದ್ದ ಮಗು ಕಪ್ಪು ಟೀ ಶರ್ಟ್ ಧರಿಸಿದೆ. ಪೊಲೀಸರಿಗೆ ಏನು ಅನಿಸಿದೆಯೋ ಆ ಟೀ ಶರ್ಟ್ ಬಿಚ್ಚಿಸಿದ್ದಾರೆ. ಕಪ್ಪು ಬಟ್ಟೆ ಎಂದಾಕ್ಷಣ ಪ್ರತಿಭಟನೆ, ವಿರೋಧದ ಸಂಕೇತ ಎನ್ನುವಂತಾಗಿದೆ. ಆದರೆ, ಏನು ಅರಿಯದ ಮಗುವೊಂದು ಹಾಕಿಕೊಂಡಿದ್ದ ಕಪ್ಪು ಬಟ್ಟೆ ಬಿಚ್ಚಿಸಿರುವುದಕ್ಕೆ ಸೋಷಿಯಲ್ ಮೀಡಿಯಾ ಸೇರಿ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!