‘ಕರೋನಾ ಫೈಟರ್ ಕಿಂಗ್’ ಸೋನು ಸೂದ್

393

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ ಸೋನು ಸೂದ್, ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ವಲಸೆ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಬಸ್, ವಿಮಾನ ವ್ಯವಸ್ಥೆ ಸಹ ಮಾಡಿದ್ದಾರೆ. ಹೀಗಾಗಿ ಇಂದು ಅದೆಷ್ಟೋ ಜನ ತಂತಮ್ಮ ಊರುಗಳಿಗೆ ತಲುಪಿದ್ದಾರೆ.

ಮಹಾರಾಷ್ಟ್ರದಲ್ಲಿದ್ದ ಕರ್ನಾಟಕ, ತಮಿಳುನಾಡು, ಒಡಿಶಾ, ಉತ್ತರ ಪ್ರದೇಶ, ಬಿಹಾರ ಹೀಗೆ ಹಲವು ರಾಜ್ಯಗಳ ವಲಸೆ ಕಾರ್ಮಿಕರಿಗೆ ನೆರವು ನೀಡಿದ್ರು. ಸೋನು ಸೂದ್ ಕಾರ್ಯಕ್ಕೆ ದೇಶದ ತುಂಬಾ ಮೆಚ್ಚುಗೆಯ ಮಾತುಗಳು ಕೇಳಿ ಬಂದ್ವು. ಇದೀಗ ಒಡಿಶಾದಲ್ಲಿ ಸೋನು ಸೂದ್ ಫೋಟೋ ಹಾಕಿ, ಕರೋನಾ ಫೈಟರ್ ಕಿಂಗ್ ಎಂದು ಬರೆದಿದ್ದಾರೆ.

ಇವರ ಜೊತೆಗೆ ಒಡಿಶಾ ನಟರಾದ ಸಬ್ಯಸಾಚಿ ಮಿಶ್ರಾ ಹಾಗೂ ರಾಣಿ ಪಂಡಾರನ್ನ ಮೆಚ್ಚಿ ಪೋಸ್ಟರ್ ಹಾಕಿದ್ದಾರೆ. ಈ ಬಗ್ಗೆ ಸೋನು ಸೂದ್ ಟ್ವೀಟ್ ಮಾಡಿದ್ದು, ಇದು ತುಂಬಾ ಚೆನ್ನಾಗಿದೆ. ಆದ್ರೆ, ನಾನು ಇದಕ್ಕೆ ಅರ್ಹನಲ್ಲ. ನಿಮ್ಮ ಪ್ರೀತಿ, ಹಾರೈಕೆ ನನ್ನನ್ನು ಕಾಪಾಡುತ್ತೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!