ರಾಜ್ಯದಲ್ಲಿಂದು 1925 ಕರೋನಾ ಕೇಸ್

313

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 1,925 ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ 23,474 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಇಂದು 603 ಜನ ಗುಣಮುಖರಾಗುವುದರೊಂದಿಗೆ 9,847 ಜನ ಡಿಸ್ಚಾರ್ಜ್ ಆಗಿದ್ದು, ಇನ್ನು 13,250 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಇಂದು 38 ಜನ ಸಾವನ್ನಪ್ಪುವ ಮೂಲಕ 373ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಬೆಂಗಳೂರು ನಗರ 16, ಬೀದರ 9, ಬೆಳಗಾವಿ 2, ದಾವಣಗೆರೆ 2, ಚಿಕ್ಕಬಳ್ಳಾಪುರ, ಹಾಸನ, ಕಲಬುರಗಿ, ಬಳ್ಳಾರಿ, ತುಮಕೂರು, ದಕ್ಷಿಣ ಕನ್ನಡದಲ್ಲಿ ತಲಾ 1 ಸಾವು ಸಂಭವಿಸಿದೆ.

ಜಿಲ್ಲಾವಾರು ಸೋಂಕಿನ ವಿವರ ಹೀಗಿದೆ..

ಬೆಂಗಳೂರು ನಗರ 1,235, ದಕ್ಷಿಣ ಕನ್ನಡ 147, ಬಳ್ಳಾರಿ 90, ವಿಜಯಪುರ 51, ಕಲಬುರಗಿ 48, ಉಡುಪಿ 45, ಧಾರವಾಡ 45, ಬೀದರ 29, ಮೈಸೂರು 25, ಕೊಪ್ಪಳ 22, ದಕ್ಷಿಣ ಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ 13, ತುಮಕೂರು 13, ಕೋಲಾರ 13, ದಾವಣಗೆರೆ 11, ಬೆಳಗಾವಿ 11, ರಾಯಚೂರು 10, ಮಂಡ್ಯ 10, ಚಿಕ್ಕಮಗಳೂರು 9, ಶಿವಮೊಗ್ಗೆ 8, ಗದಗ 7, ರಾಮನಗರ 6, ಬಾಗಲಕೋಟೆ 4, ಚಿತ್ರದುರ್ಗ 3 ಹೀಗೆ ಒಟ್ಟು 1,925 ಜನರಲ್ಲಿ ಸೋಂಕು ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!