ಅಥಣಿಯಲ್ಲಿ ಪೊಲೀಸ್ ಮತ್ತು ಪತ್ರಕರ್ತರಿಗೆ ಊಟದ ವ್ಯವಸ್ಥೆ

531

ಅಥಣಿ: ಕರೋನಾ ಮಹಾಮಾರಿ ಎಲ್ಲರನ್ನ ಕಾಡ್ತಿದೆ. ಇದೀಗ ಬರೀ ಅದೆ ಸುದ್ದಿ. ಅದೆ ಮಾತು. ಹೀಗಾಗಿ ಇದರ ವಿರುದ್ಧ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು, ಪತ್ರಕರ್ತರು ನಿರಂತರವಾಗಿ ಹೋರಾಡ್ತಿದ್ದಾರೆ. ಲಾಕ್ ಡೌನ್ ಆಗಿ 19 ದಿನಗಳು ಕಳೆದಿದ್ದು, ತಮ್ಮ ಜೀವವನ್ನೂ ಲೆಕ್ಕಿಸದೆ ಕೆಲಸ ಮಾಡ್ತಿರುವ ಕರೋನಾ ವಾರಿಯರ್ಸ್ ಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

 ಅಥಣಿ ಪಟ್ಟಣದ ಪೊಲೀಸ್ ಸಿಬ್ಬಂದಿ ಹಾಗೂ ಸುದ್ದಿ ಜಗತ್ತಿನ ಪತ್ರಿಕಾ ಮಾಧ್ಯಮದ ವರದಿಗಾರರಿಗೆ ಇಂದು ತಾಲೂಕಿನ ಹಲ್ಯಾಳ ಗ್ರಾಮ ಪಂಚಾಯತಿ ಸದಸ್ಯ ಮುದಕಣ್ಣಾ ಶೇಗುಣಸಿ ಅವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನ ಮಾಡಿದ್ರು. ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿದ್ರು.

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ಮುದಕಣ್ಣಾ ಶೇಗುಣಸಿ, ಕರೋನಾ ಮಹಾಮಾರಿ ವಿರುದ್ದ ಹೊರಾಟದಲ್ಲಿ ಎಲ್ಲರ ಸಹಕಾರ ಅಗತ್ಯ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ ಸೇರಿದಂತೆ ಹಲವು ಇಲಾಖೆಗಳು ನಿರಂತರ ಶ್ರಮಿಸುತ್ತಿದ್ದಾರೆ. ಅವರ ಕಾರ್ಯವನ್ನ ಶ್ಲಾಘಿಸಬೇಕು ಎಂದರು.

ಈ ವೇಳೆ ಚಂದ್ರಕಾಂತ ಕಾಗವಾಡ, ಕುಮಾರ ಪತ್ತಾರ, ಮಹಾದೇವ ಬಿಸಲನಾಯೀಕ, ಮಲ್ಲಿಕಾರ್ಜುನ ಶೇಗುಣಸಿ, ಅಣ್ಣಪ್ಪಾ ಬಾಗಿ, ಸಿದ್ದಪ್ಪ ಪಾಟೀಲ, ಚೇತನ ಪಾಟೀಲ ಮತ್ತು ಪತ್ರಕರ್ತರಾದ ಶಿವಾನಂದ ಪೂಜಾರಿ, ರಮೇಶ ಬಾದವಾಡಗಿ, ದೀಪಕ ಶಿಂಧೆ, ಅಬ್ದುಲ ಜಬ್ಬಾರ ಚಿಂಚಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!