ಭ್ರಷ್ಟರ ಪಾಲಾಗ್ತಿವೆ ಸರ್ಕಾರಿ ಯೋಜನೆಗಳು

400

ದೇವರಹಿಪ್ಪರಗಿ: ತಾಲೂಕಿನ ಕೊಂಡಗೂಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಂಚಲಿ ಗ್ರಾಮದಲ್ಲಿ ಸರ್ಕಾರಿ ಯೋಜನೆಗಳು ಅನ್ನೋದು ಆಟಕ್ಕೆ ಇಲ್ಲ. ಲೆಕ್ಕಕ್ಕೆ ಉಂಟು ಅಂತಾ ಉಲ್ಟಾ ಹೇಳುವ ಪರಿಸ್ಥಿತಿಯಿದೆ. ಅಂದ್ರೆ, ಈ ಗ್ರಾಮದಲ್ಲಿ ಕೈಗೊಂಡಿರುವ ಯೋಜನೆಗಳು ಕೇವಲ ಹೆಸರಿಗೆ ಮಾತ್ರ. ಹೀಗಾಗಿ ಬಿಲ್ ಬುಕ್ ನಲ್ಲಿ ಕಂಪ್ಲೀಟ್ ಆಗಿವೆ ಅನ್ನೋ ಷರಾ ಬರೆಯಲಾಗಿದೆ.

ಬಯಲು ಶೌಚಮುಕ್ತ ಮಾಡಬೇಕು ಅನ್ನೋ ಸಲುವಾಗಿ ಸರ್ಕಾರದಿಂದ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗುತ್ತೆ. ಕೆಲ ಕಡೆ ಇರೋದಕ್ಕೆ ಸರಿಯಾಗಿ ಸೂರು ಸಹ ಇರುವುದಿಲ್ಲ. ಅಂಥವರಿಗೆ ಸರ್ಕಾರಿ ಜಾಗದಲ್ಲಿ 4 ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಅದ್ಹೇಗಿವೆ ಅನ್ನೋದಕ್ಕೆ ಇಲ್ಲಿನ ಚಿತ್ರಣಗಳು ಸಾಕ್ಷಿಭೂತವಾಗಿ ಕಣ್ಣೆದುರಿಗಿವೆ.

ಗ್ರಾಮೀಣ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂದು ಸರ್ಕಾರಿ ಶಾಲೆಗಳನ್ನ ತೆರೆಯಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಗೋಳು ದೇವರಿಗೆ ಪ್ರೀತಿ. ಹೀಗಿರುವಾಗ ಹಂಚಲಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೌಂಪೌಂಡ್ ನಿರ್ಮಾಣದ ನೆಪದಲ್ಲಿಯೂ ಅಕ್ರಮವೆಸಗಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನು ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಒಂದಿಷ್ಟು ಸಬ್ಸಿಡಿ ನೀಡಲಾಗುತ್ತೆ. ಅದು ಅವರು ಆಯ್ಕೆ ಆದ್ಮೇಲೆ ಮನೆ ನಿರ್ಮಾಣದ ಹಂತ ಹಂತವಾಗಿ ಜಿಪಿಎಸ್ ಮೂಲಕ ಹಣ ಬಿಡುಗಡೆ ಮಾಡಲಾಗುತ್ತೆ. ಆದ್ರೆ, ಇಲ್ಲಿ ಮನೆ ನಿರ್ಮಾಣ ಮಾಡದೆ ಹಣ ಎತ್ತಲಾಗಿದೆ ಅನ್ನೋ ಗಂಭೀರ ಆರೋಪ ಮಾಡಲಾಗಿದೆ. ಹೀಗೆ ಹಂಚಲ ಗ್ರಾಮದಲ್ಲಿ ಸರ್ಕಾರಿ ಯೋಜನೆಗಳು ಅನ್ನೋದು ತಿಂದು ತೇಗುವರ ಪಾಲಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದು, ಇದಕ್ಕೆ ಸಂಬಂಧಪಟ್ಟವರು ಅಕ್ರಮವೆಸಗಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿಯೆಂದು ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!