ದೇ.ಹಿಪ್ಪರಗಿಯ ಪ್ರಸಿದ್ಧ ರಾವುತರಾಯ ಮಲ್ಲಯ್ಯನ ಜಾತ್ರೆ ರದ್ದು

399

ಪ್ರಜಾಸ್ತ್ರ ರದ್ದು

ದೇವರಹಿಪ್ಪರಗಿ: ಕೋವಿಡ್ 19 ಹಿನ್ನೆಲೆಯಲ್ಲಿ ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರೆಯನ್ನ ರದ್ದು ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರತಿ ವರ್ಷ ರಾವುತರಾಯ ಮಲ್ಲಯ್ಯನ ಜಾತ್ರ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಹೀಗಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಆದರೆ, ಈ ಬಾರಿ ಕರೋನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ, ಅದ್ಧೂರಿ ಜಾತ್ರೆ ನಡೆಸುವ ಬದಲು ಸರಳ ಹಾಗೂ ಸಂಕ್ಷಿಪ್ತವಾಗಿ ಪೂಜಾ ಕಾರ್ಯಕ್ರಮ ಮಾಡುವ ಮೂಲಕ ಪರಂಪರೆಯನ್ನ ಉಳಿಸಿಕೊಂಡು ಹೋಗಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಮಹಾದೇವ ಜಡಗೊಂಡ ಹೇಳಿದ್ದಾರೆ.

ಈ ವೇಳೆ ಗ್ರಾಮದ ಪ್ರಮುಖರಾದ ಬಿ.ಕೆ ಪಾಟೀಲ, ಪ್ರಮೋದ ನಾಡಗೌಡ, ಎಎಸೈ ಎಸ್.ಎಸ್ ಕಾಳಶೆಟ್ಟಿ, ಮತ್ತು ಮೂಡಾ, ರಾವುತಪ್ಪ ಜೊಂಡಿ, ರಾವುತಪ್ಪ ದೇವರಮನಿ, ಮಲ್ಲನಗೌಡ ಪಾಟೀಲ, ರಮೇಶ ಮ್ಯಾಕೇರಿ, ಕಾಶಿನಾಥ ತಳಕೇರಿ, ಸಂಗಪ್ಪ ಜಡಗೊಂಡ, ಗುರು ಶಿಂಗೆ, ಮಲ್ಲಪ್ಪ ದೇವರಮನಿ, ಶಂಕರೆಪ್ಪ ದೇವರಮನಿ, ಮಲ್ಲು ಜಮಾದಾರ, ಮುರುಗೇಶ ಅಂಗಡಿ, ಧರೆಪ್ಪ ಏಳಕೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!