ವೈದ್ಯರ ದಿನದಂದೆ ಸಾವಿಗೆ ಶರಣಾದ ವೈದ್ಯ ದಂಪತಿ

283

ಪ್ರಜಾಸ್ತ್ರ ಸುದ್ದಿ

ಮುಂಬೈ: ಎಲ್ಲೆಡೆ ಇಂದು ವೈದ್ಯರ ದಿನಾಚರಣೆಯನ್ನ ಆಚರಣೆ ಮಾಡಲಾಗ್ತಿದೆ. ವೈದ್ಯರ ಸೇವೆಗೆ ಎಲ್ಲೆಡೆ ಗೌರವ ಸಲ್ಲಿಸಲಾಗ್ತಿದೆ. ಇದರ ನಡುವೆ ಪುಣೆಯಲ್ಲಿ ವೈದ್ಯ ದಂಪತಿಯೊಂದು ನೇಣಿಗೆ ಶರಣಾಗಿದೆ. ಮದುವೆಯಾಗಿ ಒಂದೇ ತಿಂಗಳಲ್ಲೇ ದಂಪತಿ ಜೀವನ ಅಂತ್ಯವಾಗಿದೆ.

ನಿಖಿಲ್ ಶೆಂಡ್ಕರ್(28) ಹಾಗೂ ಅಂಕಿತಾ(26) ಅನ್ನೋ ದಂಪತಿ ಆತ್ಮಹತ್ಯೆ ಮಾಡಿಕೊಂಡಿದೆ. ಮದುವೆಯಾಗಿ ಒಂದು ತಿಂಗಳಾಗಿದ್ದ ಪತಿ, ಪತ್ನಿ ನಡುವೆ ಸದಾ ಜಗಳವಿರುತಂತೆ. ಅದೆ ರೀತಿ ಗುರುವಾರ ಸಹ ಜಗಳವಾಗಿದೆ. ಅದು ತಾರಕ್ಕೆ ಹೋಗಿದೆ.

ಪತ್ನಿ ಅಂಕಿತಾ ನೇಣು ಹಾಕಿಕೊಂಡ ಸ್ವಲ್ಪ ಹೊತ್ತಿನಲ್ಲೇ ಪತಿ ನಿಖಿಲ್ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!