ನಾಳೆ ಆಲಮೇಲ.. ಭಾನುವಾರ ಸಿಂದಗಿ ಸಂತೆ ರದ್ದು…

2001

ಆಲಮೇಲ/ಸಿಂದಗಿ: ಕರೋನಾ ವೈರಸ್ ಭೀತಿಯಿಂದಾಗಿ ಈಗಾಗ್ಲೇ ರಾಜ್ಯ ಸರ್ಕಾರ ಮಾರ್ಚ್ 31ರ ತನಕ ಕರ್ನಾಟಕ ಬಂದ್ ಗೆ ಆದೇಶಿಸಿದೆ. ಇದೀಗ ರಾಜ್ಯದಲ್ಲಿ ಕರೋನಾ ಶಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಾಮೂಹಿಕವಾಗಿ ಜನ ಸೇರುವುದನ್ನ ಆದಷ್ಟು ನಿಷೇಧ ಮಾಡಲಾಗ್ತಿದೆ. ಅದರಂತೆ, ವಿಜಯಪುರ ಜಿಲ್ಲೆಯ ನೂತನ ತಾಲೂಕು ಆಲಮೇಲ ಸಂತೆ ರದ್ದುಗೆ ಆದೇಶಿಸಲಾಗಿದೆ.

ಆಲಮೇಲ ಸಂತೆ ರದ್ದು ಮಾಡಲಾಗಿದ್ದು ಗ್ರಾಮೀಣ ಭಾಗದ ಜನರು ಸಹಕರಿಸಬೇಕು ಎಂದು ಆಲಮೇಲ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ ನಾಯಕ ತಿಳಿಸಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ಹೊಟೇಲ್, ತಂಪುಪಾನಿಯ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳು ಬಂದ್ ಮಾಡಲಾಗಿದೆ.

ಶುಕ್ರವಾರ ವಾರದ ಸಂತೆಯಂದು ಆಲಮೇಲ ಪಟ್ಟಣದ ಸುತ್ತಲಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಿಂದ ಜನರು ಸೇರ್ತಾರೆ. ಹೀಗಾಗಿ ಕರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಈ ವಾರ ನಡೆಯಬೇಕಿದ್ದ ಸಂತೆ ರದ್ದು ಮಾಡಲಾಗಿದೆ. ಎಲ್ಲ ಹಳ್ಳಿಯ ಜನರು ಸಹಕರಿಸಬೇಕು ಎಂದಿದ್ದಾರೆ.

ಭಾನುವಾರ ಸಿಂದಗಿ ಸಂತೆ ರದ್ದು:

ಇನ್ನು ಸಿಂದಗಿ ಪಟ್ಟಣದಲ್ಲಿ ಭಾನುವಾರ ನಡೆಯುವ ವಾರದ ಸಂತೆ ರದ್ದು ಮಾಡಲಾಗಿದೆ. ತಾಲೂಕು ಆಡಳಿತದ ವತಿಯಿಂದ ಈಗಾಗ್ಲೇ ಜಾಗೃತಿ ಮೂಡಿಸಲಾಗ್ತಿದೆ. ಭಾನುವಾರ ಸಂತೆ ರದ್ದು ಮಾಡಲಾಗಿದೆ ಎಂದು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು ‘ಪ್ರಜಾಸ್ತ್ರ’ಕ್ಕೆ ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದಿದ್ದಾರೆ.

ಕರೋನಾ ಜಾಗೃತಿ ಭಿತ್ತಿ ಪತ್ರ

ತಾಲೂಕಿನ ಚಿಕ್ಕಸಿಂದಗಿ, ಬಂದಾಳ, ಬೂದಿಹಾಳ, ರಾಂಪೂರ, ಯಂಕಂಚಿ, ಮೊರಟಗಿ, ಯರಗಲ್ಲ, ಬ್ಯಾಕೋಡ, ಬನಹಟ್ಟಿ, ಆಹೇರಿ, ಬೋರಗಿ, ಓತಿಹಾಳ, ಮಲಘಾಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ರೈತರು, ವ್ಯಾಪಾರಸ್ಥರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಸೇರ್ತಾರೆ. ಹೀಗಾಗಿ ಕರೋನಾ ಭೀತಿಯಿಂದ ಭಾನುವಾರದ ಸಂತೆ ರದ್ದು ಮಾಡಲಾಗಿದೆ.

ಈಗಾಗ್ಲೇ ತಾಲೂಕು ಆಡಳಿತ, ಪುರಸಭೆ ವತಿಯಿಂದ ಜಾಗೃತಿ ಕಾರ್ಯ ನಡೆದಿದೆ. ಅನಧಿಕೃತ ಹೋಟೆಲ್, ರಸ್ತೆ ಬದಿಯ ಡಬ್ಬಾ ಅಂಗಡಿಗಳು, ಸ್ವಚ್ಛತೆ ಕಾಪಾಡದ ಹೋಟೆಲ್ ಗಳಿಗೆ ತೆರಳಿ ಬಂದ್ ಮಾಡಲು ಸೂಚಿಸಲಾಗಿದೆ. ಕರೋನಾಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನ ಸಹ ನೀಡಲಾಗ್ತಿದೆ. ಈ ಮೂಲಕ ಆದಷ್ಟು ಸ್ವಚ್ಛತೆಯನ್ನ ಕಾಪಾಡುವುದು ಸೇರಿದಂತೆ ಕರೋನಾ ವೈರಸ್ ತಡೆಗೆ ಸೂಕ್ತ ರೀತಿಯ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!