ಡೋಲೋ 650 ಗಳಿಸಿದ್ದು 560 ಕೋಟಿ ರೂಪಾಯಿ

515

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸೋಂಕಿನ ಹಾವಳಿ ಶುರುವಾದ ದಿನದಿಂದ ಹೊಸ ಹೊಸ ಪದಗಳ ಜೊತೆಗೆ ಮಾತ್ರೆಗಳ ಹೆಸರುಗಳ ಭಾರೀ ಚರ್ಚೆಗೆ ಬಂದವು. ಅದರಲ್ಲಿ ಡೋಲೋ 650 ಮಾತ್ರೆ ಹೆಚ್ಚು ಸುದ್ದಿಯಾಯ್ತು. ರಾಜ್ಯದ ಮೈಕ್ರೋ ಲ್ಯಾಬ್ಸ್ ಲಿ ಸಂಸ್ಥೆ ಈ ಮಾತ್ರೆಯನ್ನು ಪರಿಚಯಿಸಿತು.

ಪ್ಯಾರಾಸಿಟಮೊಲ್ ವಿಭಾಗದಲ್ಲಿ ಸುಮಾರು 40 ವಿವಿಧ ಕಂಪನಿಗಳ ಮಾತ್ರೆಗಳನ್ನು ಹಿಂದಿಕ್ಕಿ ಡೋಲೋ 650 ಹೆಚ್ಚು ಮಾರಾಟವಾಯ್ತು. ಹೀಗಾಗಿ 2020ರಿಂದ ಇದುವರೆಗೂ ಬರೋಬ್ಬರಿ 560 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿವಿಧ ರೋಗ ಲಕ್ಷಣಗಳಿಗೆ ಹೆಚ್ಚಿನ ವೈದ್ಯರು ಡೋಲೋ 650 ಶಿಫಾರಸು ಮಾಡುತ್ತಾರೆ.




Leave a Reply

Your email address will not be published. Required fields are marked *

error: Content is protected !!