‘ಮಹಾ’ ನಾಡಿನಲ್ಲಿ ಒಂದೇ ದಿನದಲ್ಲಿ 3,214 ಸೋಂಕಿತರು

285

ಪ್ರಜಾಸ್ತ್ರ ಸುದ್ದಿ

ಮುಂಬೈ: ನೆರೆಯ ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 3,214 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಂಗಳವಾರ ಬಂದ ಆರೋಗ್ಯ ವರದಿಯಲ್ಲಿ ಈ ದಾಖಲೆಯ ಸೋಂಕು ಕಂಡು ಬಂದಿದೆ.

ಇಲ್ಲಿ 1,39,010 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ 6,531 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 69,631 ಜನರು ಗುಣಮುಖರಾಗಿದ್ದಾರೆ. ಮುಂಬೈ ನಗರ ಒಂದರಲ್ಲಿಯೇ 68,481 ಜನರಿಗೆ ಸೋಂಕು ತಗುಲಿದೆ.

ದೇಶದಲ್ಲಿ ಇದುವರೆಗೂ 4,56,552 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 14,483 ಜನರು ಕೋವಿಡ್ 19ಗೆ ಬಲಿಯಾಗಿದ್ದಾರೆ. 2,58,685 ಜನರು ಗುಣಮುಖರಾಗಿದ್ದು, 1,83,384 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!